Select Your Language

Notifications

webdunia
webdunia
webdunia
webdunia

ನಟ ಜಗ್ಗೇಶ್ ಅನ್ನು ಪತ್ನಿ ಪರಿಮಳ ಕರೆದುಕೊಂಡು ಹೋಗುತ್ತಿರುವುದಾದರೂ ಎಲ್ಲಿಗೆ ಗೊತ್ತಾ…?

ನಟ ಜಗ್ಗೇಶ್  ಅನ್ನು ಪತ್ನಿ ಪರಿಮಳ ಕರೆದುಕೊಂಡು ಹೋಗುತ್ತಿರುವುದಾದರೂ  ಎಲ್ಲಿಗೆ  ಗೊತ್ತಾ…?
ಬೆಂಗಳೂರು , ಶುಕ್ರವಾರ, 30 ಮಾರ್ಚ್ 2018 (10:20 IST)
ಬೆಂಗಳೂರು : ನವರಸನಾಯಕ ಜಗ್ಗೇಶ್ ಅವರು ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು,ತಮ್ಮ ನೋವು, ಸಂಭ್ರಮಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು   ತಮ್ಮ ಪತ್ನಿ ಜೊತೆ ಕಾರಿನಲ್ಲಿ ಹೋಗುತ್ತಿದ್ದ ಫೋಟೋವೊಂದನ್ನು ತೆಗೆದು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿ ಹೆಣ್ಮಕ್ಳೆ ಸ್ಟ್ರಾಂಗ್ ಗುರು ಎಂದು ಬರೆದುಕೊಂಡಿದ್ದಾರೆ.


ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಅಡುಗೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸಲು ಜಗ್ಗೇಶ್ ಅವರು ತಮ್ಮ ಪತ್ನಿ ಪರಿಮಳ ಅವರ ಜೊತೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಒಂದು ಫೋಟೋ ತೆಗೆದು ಅದನ್ನು ಅಪ್ಲೋಡ್ ಮಾಡಿ, “ಮೇಡಂ ಡ್ರೈವಿಂಗ್ ಹಸ್ಬೆಂಡ್ ಕೈಕಟ್ಟಿ ಕೂತಿಂಗ್. ಹೆಣ್ಮಕ್ಳೆ ಸ್ಟ್ರಾಂಗ್ ಗುರು. ನನ್ನ ಅಡುಗೆ ಶೋಗೆ ರುಬ್ಬೋಕೆ ಕರ್ಕೊಂಡ್ ಹೋಗ್ತಾ ಇದ್ದಾರೆ. ಹೆಂಡ್ರು ಆಡರ್ ಗೆ ಮರುಮಾತಿಲ್ಲದೆ ಹಸು ಹಿಂದೆ ಎತ್ತು. ಹ್ಹಾ ಹ್ಹಾ ಎಂದು ಟ್ವೀಟ್ ಮಾಡಿದ್ದಾರೆ.


ಜಗ್ಗೇಶ್ ಅವರು ಈ ಟ್ವೀಟ್ ಮಾಡಿ 2 ಗಂಟೆಯಲ್ಲೇ 53 ರಿಪ್ಲೇ, 27 ರೀಟ್ವೀಟ್ ಹಾಗೂ 693 ಲೈಕ್ಸ್ ಗಳು ಬಂದಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ತಾಪ್ಸಿ ಪನ್ನುವಿಗೆ ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡಿದ ಅಪರಿಚಿತ ಯುವಕ!