Publish Date: Thu, 24 May 2018 (09:00 IST)
Updated Date: Thu, 24 May 2018 (09:03 IST)
ಸಿಡ್ನಿ: ಬಾಲ್ ಟೆಂಪರಿಂಗ್ ಕಳಂಕದಿಂದಾಗಿ ಸದ್ಯಕ್ಕೆ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಪತ್ನಿ ಕ್ಯಾಂಡೀಸ್ ವೈಯಕ್ತಿಕ ಜೀವನದಲ್ಲೂ ಅವಾಂತರ ಮಾಡಿಕೊಂಡಿದ್ದಾರೆ.
ವಾರ್ನರ್ ಬಾಲ್ ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಲುಕಿದಾಗ ಕ್ಯಾಂಡೀಸ್ ಗರ್ಭಿಣಿಯಾಗಿದ್ದರಂತೆ. ಆದರೆ ಪತಿಗೆ ಒಂದು ವರ್ಷ ಕ್ರಿಕೆಟ್ ನಿಂದ ನಿಷೇಧ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಆಘಾತಕ್ಕೊಳಗಾದ ಕ್ಯಾಂಡೀಸ್ ಗೆ ಗರ್ಭಪಾತವಾಗಿದೆಯಂತೆ!
ಈಗಾಗಲೇ ಒಂದು ಮಗುವಿನ ಪೋಷಕರಾಗಿರುವ ಕ್ಯಾಂಡೀಸ್ ಮತ್ತು ವಾರ್ನರ್ ಎರಡನೇ ಮಗುವಿಗಾಗಿ ಹಂಬಲಿಸಿದ್ದರಂತೆ. ಆದರೆ ಕ್ರಿಕೆಟ್ ಮೈದಾನದಲ್ಲಿ ನಡೆದ ಘಟನೆ ನಮ್ಮ ವೈಯಕ್ತಿಕ ಜೀವನದ ಮೇಲೂ ಆಯಿತು ಎಂದು ಕ್ಯಾಂಡೀಸ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.