ನವದೆಹಲಿ: ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ತಮ್ಮ ಉತ್ತಮ ಫಾರ್ಮ್ ನಿಂದಾಗಿ ಸುದ್ದಿಯಲ್ಲಿದ್ದಾರೆ. ಈಗೀಗ ಅವರಲ್ಲಿ ಭವಿಷ್ಯದ ಸ್ಟಾರ್ ಆಟಗಾರನನ್ನು ಕಾಣುವ ಮಂದಿ ಹೆಚ್ಚಾಗುತ್ತಿದ್ದಾರೆ.
									
			
			 
 			
 
 			
					
			        							
								
																	ಇದರಿಂದಾಗಿ ರಾಹುಲ್ ಮೇಲೆ ನಿರೀಕ್ಷೆಯ ಭಾರವೂ ಹೆಚ್ಚಿದೆ. ಇಂತಿಪ್ಪ ರಾಹುಲ್ ರನ್ನು ಹಿರಿಯ ಕ್ರಿಕೆಟಿಗ ಫಾರೂಖ್ ಇಂಜಿನಿಯರ್ ಭವಿಷ್ಯದ ಸಚಿನ್ ತೆಂಡುಲ್ಕರ್ ಅಥವಾ ಸುನಿಲ್ ಗವಾಸ್ಕರ್ ಆಗುವ ಸಾಮರ್ಥ್ಯವಿರುವ ಆಟಗಾರ ಎಂದು ಹೊಗಳಿದ್ದಾರೆ.
									
										
								
																	‘ರಾಹುಲ್ ಅದ್ಭುತ ಆಟಗಾರ. ನೇರ ಬ್ಯಾಟ್ ನಿಂದ ಆಡುತ್ತಾರೆ. ಇಂಗ್ಲೆಂಡ್ ನಲ್ಲಿ ಅವರು ಉತ್ತಮ ಪ್ರದರ್ಶನ ತೋರಲಿದ್ದಾರೆ. ಅವರಿಗೆ ಭವಿಷ್ಯದಲ್ಲಿ ತೆಂಡುಲ್ಕರ್ ಅಥವಾ ಸುನಿಲ್ ಗವಾಸ್ಕರ್ ಆಗುವ ಸಾಮರ್ಥ್ಯವಿದೆ’ ಎಂದು ಫಾರೂಖ್ ಸಂದರ್ಶನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ನಿರೀಕ್ಷೆಯ ಭಾರತಕ್ಕೆ ರಾಹುಲ್ ಮೇಲೆ ಅತಿಯಾದ ಒತ್ತಡ ಬೀಳದಿದ್ದರೆ ಸಾಕು!
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.