Publish Date: Mon, 06 Aug 2018 (11:48 IST)
Updated Date: Mon, 06 Aug 2018 (11:50 IST)
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಫಾರ್ಮ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಇದೀಗ ಟೀಕೆಗಳಿಗೆ ಬೇಸತ್ತು ಶಿಖರ್ ಧವನ್ ಶಪಥ ಮಾಡಿದ್ದಾರೆ.
ಸ್ನೇಹಿತರ ದಿನಾಚರಣೆಗೆ ವಿಶ್ ಮಾಡುವ ನೆಪದಲ್ಲಿ ಭಾವನಾತ್ಮಕ ಸಂದೇಶ ಟ್ವೀಟ್ ಮಾಡಿರುವ ಶಿಖರ್ ಧವನ್ ಮರಳಿ ಫಾರ್ಮ್ ಗೆ ಬಂದೇ ಬರುತ್ತೇನೆ. ಮುಂದಿನ ಟೆಸ್ಟ್ ನಲ್ಲಿ ಚೆನ್ನಾಗಿ ಆಡಿಯೇ ಆಡುತ್ತೇನೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
‘ನಾವು ಕೂದಲೆಳೆಯಲ್ಲಿ ಸೋತಿರುವುದನ್ನು ನೋಡಿ ನಿಮಗೆಲ್ಲಾ ತುಂಬಾ ಬೇಸರವಾಗಿದೆ ಎಂದು ನನಗೆ ಗೊತ್ತು. ನಾನು ನನ್ನದೇ ಪ್ರದರ್ಶನದ ಬಗ್ಗೆ ಆತ್ಮಾವಲೋಕನ ಮಾಡಿದ್ದೇನೆ ಮತ್ತು ನಾನು ಮಾಡಿರುವ ತಪ್ಪು ಏನೆಂದು ತಿಳಿದುಕೊಂಡಿದ್ದೆನೆ. ಮುಂದಿನ ಪಂದ್ಯದಲ್ಲಿ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡುತ್ತೇನೆ. ಇದಕ್ಕಿಂತ ಉತ್ತಮ ಪ್ರದರ್ಶನ ತೋರುತ್ತೇನೆ. ನಿಮ್ಮ ಪ್ರೀತಿ ಹೀಗೇ ಇರಲಿ’ ಎಂದು ಧವನ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.