Publish Date: Mon, 06 Aug 2018 (09:38 IST)
Updated Date: Mon, 06 Aug 2018 (09:39 IST)
ಚೆನ್ನೈ: ಟೀಂ ಇಂಡಿಯಾ ಕ್ರಿಕೆಟಿಗ ರಾಂಚಿ ಮೂಲದವರಾದರೂ ಐಪಿಎಲ್ ನಿಂದಾಗಿ ತಮಿಳುನಾಡಿನವರಂತಾಗಿದ್ದಾರೆ.
ಇದೀಗ ತಮಿಳುನಾಡು ಕ್ರಿಕೆಟ್ ಲೀಗ್ ನಲ್ಲಿ ಅತಿಥಿಯಾಗಿ ಭಾಗವಹಿಸಿರುವ ಧೋನಿ ಹೊಸದೊಂದು ಪ್ರತಿಜ್ಞೆ ಮಾಡಿದ್ದಾರೆ. ಅದೇನೆಂದರೆ ಮುಂದಿನ ಬಾರಿ ಐಪಿಎಲ್ ಕೂಟದ ವೇಳೆಗೆ ತಮಿಳು ಭಾಷೆ ಕಲಿಯುತ್ತೇನೆಂದು ಧೋನಿ ಭರವಸೆ ನೀಡಿದ್ದಾರೆ.
ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರತಿನಿಧಿಸುವ ಧೋನಿಗೆ ಪ್ರತೀ ಬಾರಿ ಐಪಿಎಲ್ ಮುಗಿದಾಗಲೂ ತಮಿಳು ಭಾಷೆ ಮರೆತೇ ಹೋಗಿರುತ್ತದಂತೆ. ಆದರೆ ಮುಂದಿನ ಬಾರಿ ಐಪಿಎಲ್ ಹೊತ್ತಿಗೆ ಸರಾಗವಾಗಿ ಅಲ್ಲದಿದ್ದೂ ಅಲ್ವ ಸ್ವಲ್ಪವಾದರೂ ಮಾತನಾಡಲು ಕಲಿಯುತ್ತೇನೆಂದು ಧೋನಿ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.