Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಯಿಂದ ಪೆಟ್ಟು ತಿಂದ ಮೇಲೂ ಜೇಮ್ಸ್ ಆಂಡರ್ಸನ್ ಗರ್ವ ಕಡಿಮೆಯಾಗಿಲ್ಲ!

ವಿರಾಟ್ ಕೊಹ್ಲಿಯಿಂದ ಪೆಟ್ಟು ತಿಂದ ಮೇಲೂ ಜೇಮ್ಸ್ ಆಂಡರ್ಸನ್ ಗರ್ವ ಕಡಿಮೆಯಾಗಿಲ್ಲ!
ಎಡ್ಜ್ ಬಾಸ್ಟನ್ , ಭಾನುವಾರ, 5 ಆಗಸ್ಟ್ 2018 (09:12 IST)
ಎಡ್ಜ್ ಬಾಸ್ಟನ್: ಮತ್ತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕೆಣಕುವ ಕೆಲಸವನ್ನು ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಮಾಡಿದ್ದಾರೆ.

ಕಳೆದ ಬಾರಿ ಭಾರತ ಪ್ರವಾಸ ಮಾಡಿದ್ದಾಗ ಆಂಡರ್ಸನ್ ಕೊಹ್ಲಿ ತವರಿನಲ್ಲಿ ಮಾತ್ರ ಚೆನ್ನಾಗಿ ಆಡುತ್ತಾರೆ. ಇಂಗ್ಲೆಂಡ್ ನಲ್ಲಿ ಅವರಿಗೆ ಇಷ್ಟು ಚೆನ್ನಾಗಿ ಆಡಲು ಸಾಧ್ಯವಾಗದು. ಅವರು ಗ್ರೇಟ್ ಬ್ಯಾಟ್ಸ್ ಮನ್ ಅಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದ ಆಂಡರ್ಸನ್ ಇದೀಗ ಮೊದಲ ಟೆಸ್ಟ್ ಪಂದ್ಯದಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಕೊಹ್ಲಿ ಶತಕ ಗಳಿಸಿದ ಮೇಲೂ ಅದೇ ಗರ್ವದ ಮಾತನಾಡಿದ್ದಾರೆ.

‘ವಿರಾಟ್ ಕೊಹ್ಲಿ ಏನೂ ಅಜೇಯರಲ್ಲ. ಕೆಲವು ಕ್ಯಾಚ್ ಬಿಟ್ಟ ಕಾರಣ ನಾವು ಹಿನ್ನಡೆ ಅನುಭವಿಸಿದವಷ್ಟೇ. ಅದರಿಂದಾಗಿಯೇ ಅವರು ಮೊದಲ ಇನಿಂಗ್ಸ್ ನಲ್ಲಿ ಶತಕ ಗಳಿಸಲು ಸಾಧ್ಯವಾಯಿತು. ಕೊಹ್ಲಿ 20 ರನ್ ಗಳಿಸಿದ್ದಾಗ ನನಗೆ ಅವರನ್ನು ಔಟ್ ಮಾಡುವ ಅವಕಾಶವಿತ್ತು. ಕಳಪೆ ಫೀಲ್ಡಿಂಗ್ ನಿಂದ ಸಾಧ್ಯವಾಗಿಲ್ಲ. ಈ ಕ್ರಿಕೆಟ್ ಜಗತ್ತಿನಲ್ಲಿ ಯಾರೂ ಅಜೇಯರಿಲ್ಲ. ಕೊಹ್ಲಿಯನ್ನೂ ನಾವು ಔಟ್ ಮಾಡಬಲ್ಲೆವು’ ಎಂದು ಆಂಡರ್ಸನ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ನಿವೃತ್ತಿ ಬಿಟ್ಟು ಟೆಸ್ಟ್ ಕ್ರಿಕೆಟ್ ಗೆ ಮರಳಿ ಬನ್ನಿ ಧೋನಿ!