Select Your Language

Notifications

webdunia
webdunia
webdunia
Sunday, 13 April 2025
webdunia

ನಿವೃತ್ತಿ ಬಿಟ್ಟು ಟೆಸ್ಟ್ ಕ್ರಿಕೆಟ್ ಗೆ ಮರಳಿ ಬನ್ನಿ ಧೋನಿ!

ಧೋನಿ
ನವದೆಹಲಿ , ಭಾನುವಾರ, 5 ಆಗಸ್ಟ್ 2018 (09:09 IST)
ನವದೆಹಲಿ: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿರುವ ದಿನೇಶ್ ಕಾರ್ತಿಕ್ ಪರದಾಟ ನೋಡಿ ಟ್ವಿಟರ್ ನಲ್ಲಿ ಅಭಿಮಾನಿಗಳು ಹೊಸದೊಂದು ಬೇಡಿಕೆಯಿಟ್ಟಿದ್ದಾರೆ.
 

ದಿನೇಶ್ ಕಾರ್ತಿಕ್ ಕಳಪೆ ಕೀಪಿಂಗ್ ನೋಡಿ ಸಿಟ್ಟಿಗೆದ್ದಿರುವ ಟ್ವಿಟರಿಗರು, ಈಗಾಗಲೇ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿಯಾಗಿರುವ ಧೋನಿಗೆ ಮರಳಿ ಬರುವಂತೆ ಒತ್ತಾಯಿಸುತ್ತಿದ್ದಾರೆ.

ಅತ್ತ ಬ್ಯಾಟಿಂಗ್ ನಲ್ಲೂ ದಯನೀಯ ವೈಫಲ್ಯ ಕಂಡಿರುವ ಕಾರ್ತಿಕ್ ಕೀಪಿಂಗ್ ನಲ್ಲೂ ಸಾಕಷ್ಟು ಕ್ಯಾಚ್ ಬಿಟ್ಟಿದ್ದಾರೆ. ಇದರಿಂದ ಸಿಟ್ಟಿಗೆದ್ದಿರುವ ಅಭಿಮಾನಿಗಳು ಕಾರ್ತಿಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ತಕ್ಕವರಲ್ಲ. ನಾವು ನೋಡಿದ ಅತ್ಯಂತ ಕಳಪೆ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಎಂದು ಛೀಮಾರಿ ಹಾಕುತ್ತಿದ್ದಾರೆ.

ಇನ್ನು ಕೆಲವರು ಧೋನಿಗೆ ಟೆಸ್ಟ್ ಕ್ರಿಕೆಟ್ ಮರಳಲು ಹೇಳಿದರೆ, ಮತ್ತೆ ಕೆಲವರು ದಿನೇಶ್ ಕಾರ್ತಿಕ್ ಗೆ ಟಿಪ್ಸ್ ಕೊಡಲು ಸಲಹೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಗೆ ಅಭಿಮಾನಿಗಳ ಛೀಮಾರಿ