Select Your Language

Notifications

webdunia
webdunia
webdunia
webdunia

ಕ್ರಿಕೆಟರ್ ಹಾರ್ದಿಕ್ ಪಾಂಡ್ಯಾ ಹಾಗೂ ನಟಿ ಇಶಾ ಗುಪ್ತಾ ಮದುವೆ ಆಗುತ್ತಿರುವುದು ನಿಜಾನಾ?

ಕ್ರಿಕೆಟರ್ ಹಾರ್ದಿಕ್ ಪಾಂಡ್ಯಾ ಹಾಗೂ ನಟಿ ಇಶಾ ಗುಪ್ತಾ  ಮದುವೆ ಆಗುತ್ತಿರುವುದು ನಿಜಾನಾ?
ಮುಂಬೈ , ಸೋಮವಾರ, 6 ಆಗಸ್ಟ್ 2018 (06:38 IST)
ಮುಂಬೈ : ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಹಾಗೂ ಬಾಲಿವುಡ್ ನಟಿ ಇಶಾ ಗುಪ್ತಾ ನಡುವೆ ಲವ್ವಿ-ಡುವ್ವಿ ಶುರುವಾಗಿದೆ, ಸದ್ಯದಲ್ಲೆ ಅವರಿಬ್ಬರು ವಿವಾಹವಾಗಲಿದ್ದಾರೆ ಎಂಬ ಮಾತು ಸುದ್ದಿ ಕೇಳಿಬಂದಿದ್ದು, ಈ ವಿಚಾರದ ಕುರಿತು ಇದೀಗ ನಟಿ ಇಶಾ ಗುಪ್ತಾ ಸ್ಪಷ್ಟನೆ ನೀಡುವುದರ ಮೂಲಕ ಈ ವಿಚಾರಕ್ಕೆ ತೆರೆ ಎಳೆದಿದ್ದಾರೆ.


ಪಾಂಡ್ಯಾ ಮತ್ತು ಇಶಾ ಗುಪ್ತಾ ನಡುವಿನ ಸುದ್ದಿಗಳಿಗೆ ಈವರೆಗೂ ಇವರಿಬ್ಬರು ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈಗ ಸ್ವತಃ ಇಶಾ ಗುಪ್ತಾ ಪ್ರತಿಕ್ರಿಯೆ ನೀಡಿದ್ದು, ನಾನು ಸದ್ಯಕ್ಕಂತೂ ಯಾರನ್ನೂ ಕೂಡ ಮದುವೆ ಆಗುವುದಿಲ್ಲ. ನನ್ನ ವೈಯಕ್ತಿಕ ಬದುಕನ್ನು ಹಾಸ್ಯ ಮಾಡಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.


ಅಲ್ಲದೇ ತಾನು ಇನ್ನೊಬ್ಬರ ವ್ಯಕ್ತಿತ್ವವನ್ನು ತುಂಬಾ ಗೌರವಿಸುತ್ತೇನೆ. ಮಾಧ್ಯಮಗಳು ನನಗೆ ಸದಾ ಬೆಂಬಲಿಸಿವೆ ಎಂದು ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಗ ಮಾಡಿದ ಈ ಕೆಲಸಕ್ಕೆ ಮಾಧ್ಯಮದವರಲ್ಲಿ ಕ್ಷಮೆ ಕೇಳಿದ ನಟಿ ಕಾಜೋಲ್