Publish Date: Thu, 06 Sep 2018 (08:51 IST)
Updated Date: Thu, 06 Sep 2018 (08:53 IST)
ಬೆಂಗಳೂರು: ಮುಂಬರುವ ಐಪಿಎಲ್ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಗಳ ವಿಭಾಗಕ್ಕೆ ಹಿರಿಯ ವೇಗಿ ಆಶಿಶ್ ನೆಹ್ರಾ ಸೇರ್ಪಡೆಯಾಗಲಿದ್ದಾರೆ.
ಕಳೆದ ಆವೃತ್ತಿಯಲ್ಲೇ ನೆಹ್ರಾ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದ್ದರು. ಆದರೆ ಅವರ ಆಯ್ಕೆ ಅಧಿಕೃತವಾಗಿರಲಿಲ್ಲ. ಈಗ ಅವರನ್ನು ಆರ್ ಸಿಬಿ ಅಧಿಕೃತವಾಗಿ ತನ್ನ ಕೋಚ್ ಎಂದು ಆಯ್ಕೆ ಮಾಡಿಕೊಂಡಿದೆ.
ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಜತೆಗೆ ನೆಹ್ರಾ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದಕ್ಕೆ ಮೊದಲು ನೆಹ್ರಾ ಆಟಗಾರರಾಗಿ ಡೆಲ್ಲಿ, ಹೈದರಾಬಾದ್, ಮುಂಬೈ ಇಂಡಿಯನ್ಸ್, ಪುಣೆ ವಾರಿಯರ್ಸ್ ತಂಡದ ಪರವಾಗಿ ಆಡಿದ್ದರು. ಇದೀಗ ಆರ್ ಸಿಬಿಗೆ ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ ಜತೆಗೆ ಕೆಲಸ ಮಾಡಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.