Select Your Language

Notifications

webdunia
webdunia
webdunia
webdunia

ಲಸಿತ್ ಮಾಲಿಂಗಗೆ ಸಚಿನ್ ತೆಂಡುಲ್ಕರ್ ಮಾಡಿದ ಟ್ವೀಟ್ ನೋಡಿ ಕನ್ ಫ್ಯೂಸ್ ಆದ ಟ್ವಿಟರಿಗರು

ಲಸಿತ್ ಮಾಲಿಂಗಗೆ ಸಚಿನ್ ತೆಂಡುಲ್ಕರ್ ಮಾಡಿದ ಟ್ವೀಟ್ ನೋಡಿ ಕನ್ ಫ್ಯೂಸ್ ಆದ ಟ್ವಿಟರಿಗರು
ಮುಂಬೈ , ಗುರುವಾರ, 30 ಆಗಸ್ಟ್ 2018 (09:13 IST)
ಮುಂಬೈ: ಶ್ರೀಲಂಕಾ ಕ್ರಿಕೆಟಿಗ, ಒಂದು ಕಾಲದಲ್ಲಿ ಎದುರಾಳಿಗಳಿಗೆ ತಮ್ಮ ಲಗೋರಿ ಎಸೆತಗಳಿಂದ ಎದೆ ನಡುಗಿಸಿದ ಲಸಿತ್ ಮಾಲಿಂಗಗೆ ಬರ್ತ್ ಡೇ ಶುಭಾಷಯ ಕೋರಿ ಸಚಿನ್ ತೆಂಡುಲ್ಕರ್ ಮಾಡಿದ ಟ್ವೀಟ್ ನೋಡಿ ಟ್ವಿಟರಿಗರು ಕನ್ ಫ್ಯೂಸ್ ಆಗಿದ್ದಾರೆ!

ನಿನ್ನೆ ಜನ್ಮದಿನ ಆಚರಿಸಿದ್ದ ಐಪಿಎಲ್ ನ ಮುಂಬೈ ಇಂಡಿಯನ್ಸ್ ಆಟಗಾರ ಮಾಲಿಂಗಗೆ ಸಚಿನ್ ‘ಬಾಲ್ (ಹಿಂದಿಯಲ್ಲಿ ಕೂದಲು) ಬಗ್ಗೆ ಗಮನ ಕಡಿಮೆ ಮಾಡಿ ಬಾಲ್ (ಚೆಂಡು) ಬಗ್ಗೆ ಹೆಚ್ಚು ಗಮನ ಕೊಡು’ ಎಂದು ಲಸಿತ್ ಮಾಲಿಂಗ ಬಣ್ಣ ಬಣ್ಣದ ಹೇರ್ ಸ್ಟೈಲ್ ಬಗ್ಗೆ ಕಿಚಾಯಿಸಿ ಟ್ವೀಟ್ ಮಾಡಿದ್ದರು.

ಸಾಮಾನ್ಯವಾಗಿ ಟೀಂ ಇಂಡಿಯಾದವರೇ ಆದ ಸಚಿನ್ ಸ್ನೇಹಿತ ವೀರೇಂದ್ರ ಸೆಹ್ವಾಗ್ ಇಂತಹ ತಮಾಷೆಯ ಟ್ವೀಟ್ ಮಾಡಿ ಬರ್ತ್ ಡೇ ಶುಭಕೋರುತ್ತಾರೆ. ಆದರೆ ಸಚಿನ್ ಇಂತಹ ಟ್ವೀಟ್ ಮಾಡಿರುವುದು ನೋಡಿ ಕನ್ ಫ್ಯೂಸ್ ಆದ ಟ್ವಿಟರಿಗರು, ‘ವೀರೂ ಏನಾದ್ರೂ ನಿಮ್ಮ ಅಕೌಂಟ್ ನಿಂದ ಟ್ವೀಟ್ ಮಾಡಿದರಾ?’ ಎಂದು ಕಾಲೆಳೆದಿದ್ದಾರೆ. ಮತ್ತೆ ಕೆಲವರು ನಿಮ್ಮ ಪಾಸ್ ವರ್ಡ್ ನ್ನು ಸೆಹ್ವಾಗ್ ಜತೆಗೆ ಶೇರ್ ಮಾಡಿದ್ದೀರಾ ಎಂದು ತಮಾಷೆ ಮಾಡಿದ್ದಾರೆ. ಅಂತೂ ವೀರೂ ಸ್ಟೈಲ್ ನಲ್ಲಿ ಟ್ವೀಟ್ ಮಾಡಿ ಸಚಿನ್ ಸುದ್ದಿಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಈ ಯುವ ಆಟಗಾರನಿಂದ ಕೆಎಲ್ ರಾಹುಲ್ ಗೆ ಕಂಟಕ?