Select Your Language

Notifications

webdunia
webdunia
webdunia
webdunia

ಸಚಿನ್ ತೆಂಡುಲ್ಕರ್ ದಾಖಲೆ ಮೇಲೆ ವಿರಾಟ್ ಕೊಹ್ಲಿ ಕಣ್ಣು!

ಸಚಿನ್ ತೆಂಡುಲ್ಕರ್ ದಾಖಲೆ ಮೇಲೆ ವಿರಾಟ್ ಕೊಹ್ಲಿ ಕಣ್ಣು!
ಮುಂಬೈ , ಶುಕ್ರವಾರ, 24 ಆಗಸ್ಟ್ 2018 (08:29 IST)
ಮುಂಬೈ:  ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ದಾಖಲೆಯೊಂದನ್ನು ಮುರಿಯುವ ಅವಕಾಶ ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಸಿಕ್ಕಿದೆ.
 

ಇದಕ್ಕೆ ಅವರು ಮುಂದಿನ ಟೆಸ್ಟ್ ಪಂದ್ಯದಲ್ಲಿ ಕೇವಲ 6 ರನ್ ಮಾಡಿದರೆ ಸಾಕು. ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರ ಅತೀ ವೇಗದ 6000 ರನ್ ಪೇರಿಸಿದ ದಾಖಲೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿದೆ. ಗವಾಸ್ಕರ್ 117 ಇನಿಂಗ್ಸ್ ನಿಂದ 6000 ರನ್ ಪೂರೈಸಿದ್ದರು.

120 ಇನಿಂಗ್ಸ್ ಗಳಿಂದ 6000 ರನ್ ಪೂರೈಸಿದ ಸಚಿನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಸದ್ಯಕ್ಕೆ ಕೊಹ್ಲಿ ದ್ವಿತೀಯ ಸ್ಥಾನದಲ್ಲಿರುವ ಸಚಿನ್ ರನ್ನು ಹಿಂದಿಕ್ಕುವ ಅವಕಾಶ ಎದುರಾಗಿದೆ. ಇದುವರೆಗೆ 118 ಇನಿಂಗ್ಸ್ ಆಡಿರುವ ಕೊಹ್ಲಿ 5994 ರನ್ ಗಳಿಸಿದ್ದಾರೆ. ಮುಂದಿನ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 6 ರನ್ ಗಳಿಸಿದರೆ ಸಚಿನ್ ದಾಖಲೆ ನೆಲಸಮವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಕೋಚ್ ರವಿಶಾಸ್ತ್ರಿಯೇ ಆದರೂ ಟೀಂ ಇಂಡಿಯಾ ತುಂಬಾ ಈಗ ರಾಹುಲ್ ದ್ರಾವಿಡ್ ಹುಡುಗರದ್ದೇ ಕಾರುಬಾರು!