Publish Date: Thu, 23 Aug 2018 (10:06 IST)
Updated Date: Thu, 23 Aug 2018 (10:08 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಕಳಪೆ ಫಾರ್ಮ್ ಪ್ರದರ್ಶಿಸಿದ ಆರಂಭಿಕ ಮುರಳಿ ವಿಜಯ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ಮುಂದಿನ ಪಂದ್ಯಗಳಿಗೆ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಮೊದಲ ಎರಡು ಟೆಸ್ಟ್ ಪಂದ್ಯ ಆಡಿದ್ದ ಮುರಳಿ ವಿಜಯ್ ಎರಡೂ ಪಂದ್ಯಗಳಲ್ಲಿ 10 ರ ಅಂಕಿ ದಾಟಿರಲಿಲ್ಲ. ಮೂರನೇ ಪಂದ್ಯಕ್ಕೆ ಅವರು ತಂಡದ ಆಡುವ ಬಳಗಕ್ಕೆ ಆಯ್ಕೆಯಾಗಿರಲಿಲ್ಲ. ಕುಲದೀಪ್ ಯಾದವ್ ದ್ವಿತೀಯ ಟೆಸ್ಟ್ ಪಂದ್ಯವಾಡಿದ್ದರೂ ಹೇಳಿಕೊಳ್ಳುವಂತಹ ಪರಿಣಾಮ ಬೀರಲಿಲ್ಲ.
ಇದೀಗ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡಾ ಗಾಯಗೊಂಡಿದ್ದು, ಒಂದು ವೇಳೆ ಅವರು ನಾಲ್ಕನೇ ಪಂದ್ಯಕ್ಕೆ ಫಿಟ್ ಆಗಿರದೇ ಇದ್ದಿದ್ದರೆ ಅವರ ಸ್ಥಾನದಲ್ಲಿ ಕುಲದೀಪ್ ಬದಲಿಗೆ ಆಯ್ಕೆಯಾಗಿರುವ ಭಾರತ ಎ ತಂಡದ ಆಟಗಾರ ಹನುಮ ವಿಹಾರಿ ಆಡುವ ಸಾಧ್ಯತೆಯಿದೆ. ಇನ್ನು, ಮುರಳಿ ವಿಜಯ್ ಬದಲಿಗೆ ಎ ತಂಡದ ಮಾಜಿ ನಾಯಕ ಪೃಥ್ವಿ ಶಾ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.