ಟ್ರೆಂಟ್ ಬ್ರಿಡ್ಜ್: ಸತತ ಸೋಲಿನಿಂದ ಕಂಗೆಟ್ಟಿದ್ದ ಟೀಂ ಇಂಡಿಯಾಗೆ ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆದ ತೃತೀಯ ಟೆಸ್ಟ್ ಪಂದ್ಯದ ಗೆಲುವು ಸಂಜೀವಿನಿಯಾಗಿದೆ. ಇದರ ಜತೆಗೆ ನಾಯಕ ಕೊಹ್ಲಿಗೆ ಇನ್ನೊಂದು ಗೌರವ ಸಿಕ್ಕಿದೆ.
ಟ್ರೆಂಟ್ ಬ್ರಿಡ್ಜ್ ಅಂಗಣದ ಗೌರವಾನ್ವಿತ ಆಟಗಾರರ ಪಟ್ಟಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಹೆಸರು ಸೇರ್ಪಡೆಯಾಗಲಿದೆ. ತೃತೀಯ ಟೆಸ್ಟ್ ಪಂದ್ಯದಲ್ಲಿ 23 ನೇ ಟೆಸ್ಟ್ ಶತಕ ಹೊಡೆದ ಸಾಧನೆಗೆ ಕೊಹ್ಲಿಗೆ ಈ ಗೌರವ ಸಂದಿದೆ.
ಇದಕ್ಕೂ ಮೊದಲು ಭಾರತೀಯರ ಪೈಕಿ ಮುರಳಿ ವಿಜಯ್ 2014 ರಲ್ಲಿ ಇಲ್ಲಿ ಗೌರವ ಪಡೆದಿದ್ದರು. ಇದೀಗ ವಿರಾಟ್ ಕೊಹ್ಲಿಗೆ ಈ ಗೌರವ ಸಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.