Publish Date: Wed, 22 Aug 2018 (16:14 IST)
Updated Date: Wed, 22 Aug 2018 (16:16 IST)
ಟ್ರೆಂಟ್ ಬ್ರಿಡ್ಜ್: ಇಂಗ್ಲೆಂಡ್ ವಿರುದ್ಧ ತೃತೀಯ ಟೆಸ್ಟ್ ಪಂದ್ಯವನ್ನು ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತದ ಪರ ಸೌರವ್ ಗಂಗೂಲಿ ದಾಖಲೆ ಮುರಿದಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿ ನಾಯಕನಾಗಿ ದಾಖಲಿಸಿದ 22 ನೇ ಗೆಲುವು ಇದಾಗಿತ್ತು. ಈ ಮೂಲಕ ನಾಯಕನಾಗಿ ಅತೀ ಹೆಚ್ಚು ಪಂದ್ಯ ಗೆಲ್ಲಿಸಿದ ಭಾರತೀಯ ನಾಯಕರ ಪಟ್ಟಿಯಲ್ಲಿ 21 ಗೆಲುವುಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದ ಗಂಗೂಲಿ ದಾಖಲೆ ಅಳಿಸಿದ್ದಾರೆ.
ಸದ್ಯಕ್ಕೆ ಕೊಹ್ಲಿ ಅತೀ ಹೆಚ್ಚು ಗೆಲುವು ದಾಖಲಿಸಿದ ನಾಯಕರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿ 27 ಗೆಲುವುಗಳೊಂದಿಗೆ ಎಂಎಸ್ ಧೋನಿ ಇದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಕೊಹ್ಲಿಗೆ ಧೋನಿ ದಾಖಲೆ ಮುರಿಯುವುದೂ ಕಷ್ಟವೇನಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.