Publish Date: Wed, 22 Aug 2018 (09:29 IST)
Updated Date: Wed, 22 Aug 2018 (09:30 IST)
ಟ್ರೆಂಟ್ ಬ್ರಿಡ್ಜ್: ಎಲ್ಲರೂ ಗೆದ್ದೆತ್ತಿನ ಬಾಲ ಹಿಡಿಯುವವರೇ ಎಂಬುದು ಟೀಂ ಇಂಡಿಯಾ ಟೀಕಾಕಾರರ ವಿಚಾರದಲ್ಲೂ ನಿಜವಾಗಿದೆ. ಮೊನ್ನೆಯಷ್ಟೇ ಟೀಂ ಇಂಡಿಯಾವನ್ನು ಲೇವಡಿ ಮಾಡಿದ್ದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಇಂದು ಹೊಗಳಿ ಅಟ್ಟಕ್ಕೇರಿಸಿದ್ದಾರೆ.
ಭಾರತ ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಸೋತಾಗ ಟೀಂ ಇಂಡಿಯಾ ಒಂದು ಸಾಧಾರಣ ತಂಡ. ಇದು ಇಂಗ್ಲೆಂಡ್ ಗೆ ಯಾವತ್ತೂ ಸರಿಸಾಟಿಯಲ್ಲ ಎಂದು ಲೇವಡಿ ಮಾಡಿದ್ದ ಮೈಕಲ್ ವಾನ್ ಇಂದು ವಿರಾಟ್ ಕೊಹ್ಲಿ ಶತಕ ಗಳಿಸುತ್ತಿದ್ದಂತೇ ಮಾತಿನ ದಾಟಿಯನ್ನೇ ಬದಲಿಸಿದ್ದಾರೆ.
ಮೊದಲ ಇನಿಂಗ್ಸ್ ನಲ್ಲಿ ಮೂರು ರನ್ ಗಳಿಗೆ ಶತಕ ತಪ್ಪಿಸಿಕೊಂಡಿದ್ದ ಕೊಹ್ಲಿ ದ್ವಿತೀಯ ಇನಿಂಗ್ಸ್ ನಲ್ಲಿ ಶತಕ ದಾಖಲಿಸಿದ್ದರು. ಇದನ್ನು ನೋಡಿ ಮೈಕಲ್ ವಾನ್ ಇದೀಗ ಕೊಹ್ಲಿಯನ್ನು ವಿಶ್ವಶ್ರೇಷ್ಠ ಆಟಗಾರ ಎಂದು ಹೊಗಳಿದ್ದಾರೆ. ಈತ ಇಂಗ್ಲೆಂಡ್ ನಲ್ಲಿ ಚೆನ್ನಾಗಿ ಆಡಬಹುದೇ ಎಂಬ ಅನುಮಾನ ಕೆಲವರಿಗಿತ್ತು. ಆದರೆ ಅದನ್ನೆಲ್ಲಾ ಸುಳ್ಳು ಮಾಡಿದ್ದಾರೆ. ಅವರು ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲೂ ಶ್ರೇಷ್ಠ ಆಟಗಾರ ಎಂದು ವಾನ್ ಹೊಗಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.