Publish Date: Tue, 21 Aug 2018 (09:33 IST)
Updated Date: Tue, 21 Aug 2018 (09:34 IST)
ಟ್ರೆಂಟ್ ಬ್ರಿಡ್ಜ್: ಗೆದ್ದಾಗ ಹೊಗಳಿ ಹೊನ್ನ ಶೂಲಕ್ಕೇರಿಸಿ, ಸೋತಾಗ ಪಾತಾಳಕ್ಕೆ ತಳ್ಳುವುದು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಹೊಸದಲ್ಲ. ಇದೀಗ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ವಿಚಾರದಲ್ಲೂ ಇದನ್ನೇ ಮಾಡಲಾಗುತ್ತಿದೆ.
ಇಂಗ್ಲೆಂಡ್ ವಿರುದ್ಧ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿರುವ ರಿಷಬ್ ಪಂತ್ ರನ್ನು ಈಗಲೇ ಧೋನಿಗೆ ಹೋಲಿಕೆ ಮಾಡಲು ಶುರುಮಾಡಿದ್ದಾರೆ.
ಮೊದಲ ಪಂದ್ಯದಲ್ಲೇ ರಿಷಬ್ ಸಿಕ್ಸರ್ ಮೂಲಕ ಚೊಚ್ಚಲ ರನ್ ಗಳಿಸಿ ದಾಖಲೆ ಮಾಡಿದ್ದಲ್ಲದೆ, ಕೀಪಿಂಗ್ ನಲ್ಲೂ ಐದು ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಇಷ್ಟೇ ಸಾಕಾಯಿತು ನೋಡಿ. ಇದೀಗ ಡೆಲ್ಲಿ ಡ್ಯಾಶರ್ ರಿಷಬ್ ರನ್ನು ಆಧುನಿಕ ಧೋನಿ, ಧೋನಿಯ ಸಕ್ಸಸರ್ ಎಂದೆಲ್ಲಾ ಹೋಲಿಕೆ ಮಾಡಲು ಶುರು ಮಾಡಿದ್ದಾರೆ. ಒಂದೇ ಯಶಸ್ಸಿಗೆ ಇಷ್ಟೊಂದು ಈ ಯುವ ಆಟಗಾರನಿಗೆ ಒತ್ತಡ ತಂದರೆ ಆತ ಮುಂದಿನ ಪಂದ್ಯಗಳಲ್ಲಿ ಆಡುವುದಾದರೂ ಹೇಗೆ? ಗೆದ್ದಾಗ ಹೊಗಳಿ ಅಟ್ಟಕ್ಕೇರಿಸುವ ಬದಲು ಆತನಿಗೂ ಕೊಂಚ ಸಮಯ ಕೊಟ್ಟರೆ ಒಳ್ಳೆಯದಲ್ಲವೇ?
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.