Select Your Language

Notifications

webdunia
webdunia
webdunia
webdunia

ಛೀ... ಹೀಗೆ ಔಟಾಗಿ ಬೇಡದ ದಾಖಲೆ ಮಾಡಿಬಿಟ್ಟರಲ್ಲಾ ಶಿಖರ್ ಧವನ್!

ಛೀ... ಹೀಗೆ ಔಟಾಗಿ ಬೇಡದ ದಾಖಲೆ ಮಾಡಿಬಿಟ್ಟರಲ್ಲಾ ಶಿಖರ್ ಧವನ್!
ಟ್ರೆಂಟ್ ಬ್ರಿಡ್ಜ್ , ಮಂಗಳವಾರ, 21 ಆಗಸ್ಟ್ 2018 (09:30 IST)
ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ತೃತೀಯ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ ಶಿಖರ್ ಧವನ್ ಬೇಡದ ದಾಖಲೆಯೊಂದಕ್ಕೆ ಪಾತ್ರರಾದರು.
 

ದ್ವಿತೀಯ ಇನಿಂಗ್ಸ್ ನಲ್ಲಿ ಉತ್ತಮ ಆರಂಭ ದೊರಕಿಸಿ 44 ರನ್ ಗಳಿಗೆ ಧವನ್ ಔಟಾದರು. ಅದೂ ಸ್ಟಂಪ್ ಔಟ್. ಈ ರೀತಿ ಟೆಸ್ಟ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ನಲ್ಲಿ ಸ್ಟಂಪ್ ಔಟ್ ಆಗುವ ಮೂಲಕ ಧವನ್ 66 ವರ್ಷಗಳ ಬೇಡದ ದಾಖಲೆಯೊಂದನ್ನು ಮೈಮೇಲೆಳೆದುಕೊಂಡರು.

ಈ ರೀತಿ ಇಂಗ್ಲೆಂಡ್ ನಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಔಟಾದ ವಿಶ್ವದ ಮೂರನೇ ಆಟಗಾರ ಎಂಬ ಕುಖ್ಯಾತಿಗೆ ಧವನ್ ಪಾತ್ರರಾದರು. ಇದಕ್ಕೂ ಮೊದಲು ಭಾರತದವರೇ ಆದ ಪಂಕಜ್ ರಾಯ್ ಮತ್ತು ಪಾಕಿಸ್ತಾನದ ಮುಷ್ತಾಕ್ ಅಲಿ ಈ ಕುಖ್ಯಾತಿಗೊಳಗಾಗಿದ್ದರು. ಇದೀಗ 66 ವರ್ಷದ ಬಳಿಕ ಧವನ್ ಈ ಕಳಪೆ ದಾಖಲೆ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿ ಸಾನಿಯಾ ಮಿರ್ಜಾಗೆ ಮಧ್ಯರಾತ್ರಿ ಎದ್ದು ಕೂತು ಇದನ್ನು ಸೇವಿಸುವ ಬಯಕೆಯಂತೆ!