Publish Date: Mon, 20 Aug 2018 (10:47 IST)
Updated Date: Mon, 20 Aug 2018 (13:00 IST)
ಟ್ರೆಂಟ್ ಬ್ರಿಡ್ಜ್: ಇಂಗ್ಲೆಂಡ್ ವಿರುದ್ಧ ತೃತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಐದು ವಿಕೆಟ್ ಕಿತ್ತು ಸಾಧನೆ ಮಾಡಿದ ಹಾರ್ದಿಕ್ ಪಾಂಡ್ಯ ತಾನು ಯಾವತ್ತೂ ಕಪಿಲ್ ದೇವ್ ಆಗಲು ಬಯಸಿರಲಿಲ್ಲ ಎಂದಿದ್ದಾರೆ.
ಹಾರ್ದಿಕ್ ಪಾಂಡ್ಯರನ್ನು ಹಲವು ಮಾಜಿಗಳು ಕಪಿಲ್ ದೇವ್ ಗೆ ಹೋಲಿಸುತ್ತಿದ್ದರು. ಜತೆಗೆ ಪಾಂಡ್ಯ ವಿಫಲರಾದಾಗ ಏನೇ ಮಾಡಿದರೂ ಈತ ಕಪಿಲ್ ದೇವ್ ಆಗಲು ಸಾಧ್ಯವಿಲ್ಲ ಎಂದು ಮಾಜಿ ದಿಗ್ಗಜ ಕ್ರಿಕೆಟಿಗನ ಹೆಸರು ಹೇಳಿ ಟಾಂಗ್ ಕೊಡುತ್ತಿದ್ದರು. ಅಂತಹವರಿಗೆ ಇದೀಗ ಪಾಂಡ್ಯ ತಿರುಗೇಟು ನೀಡಿದ್ದಾರೆ.
‘ನಾನು ಯಾವತ್ತೂ ಕಪಿಲ್ ದೇವ್ ಆಗಲು ಬಯಸಲಿಲ್ಲ. ನನ್ನನ್ನು ಅವರ ಜತೆ ಹೋಲಿಸಬೇಡಿ. ಕೆಲವರು ಇಂತಹ ಕೆಲಸ ಮಾಡಲಿಕ್ಕೆಂದೇ ಸಂಭಾವನೆ ಪಡೆಯುತ್ತಾರೆ. ಹಾಗಾಗಿ ಇಂತಹ ಹೋಲಿಕೆಗಳನ್ನೆಲ್ಲಾ ಮಾಡುತ್ತಿರುತ್ತಾರೆ. ನಾನು ಹಾರ್ದಿಕ್ ಪಾಂಡ್ಯ ಆಗಿಯೇ ಇರಲು ಬಯಸುತ್ತೇನೆ. ಸೋತಾಗ ಟೀಕಿಸಿ, ಗೆದ್ದಾಗ ಕಪಿಲ್ ದೇವ್ ಗೆ ಹೋಲಿಸಿ ನನ್ನನ್ನು ಹೊಗಳಿ ಅಟ್ಟಕ್ಕೇರಿಸುವುದು ಬೇಡ’ ಎಂದು ಖಡಕ್ಕಾಗಿ ಹಾರ್ದಿಕ್ ಪಾಂಡ್ಯ ಟೀಕಾಕಾರರಿಗೆ ಉತ್ತರ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.