Publish Date: Mon, 20 Aug 2018 (09:20 IST)
Updated Date: Mon, 20 Aug 2018 (09:22 IST)
ಟ್ರೆಂಟ್ ಬ್ರಿಡ್ಜ್: ಕಳೆದ ಬಾರಿ ಇಂಗ್ಲೆಂಡ್ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ಕೆಎಲ್ ರಾಹುಲ್ 199 ರನ್ ಗಳಿಗೆ ಔಟ್ ಆಗಿದ್ದ ಇನಿಂಗ್ಸ್ ಕ್ರಿಕೆಟ್ ಪ್ರಿಯರಿಗೆ ನೆನಪಿರುತ್ತದೆ.
ಆವತ್ತು 199 ರನ್ ಗಳಿಗೆ ರಾಹುಲ್ ಔಟ್ ಆಗಲು ಕಾರಣವಾಗಿದ್ದು ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್. ಅದರ ಬಳಿಕ ರಾಹುಲ್ ಗೆ ದೊಡ್ಡ ಇನಿಂಗ್ಸ್ ಆಡಲು ಸಾಧ್ಯವಾಗಲೇ ಇಲ್ಲ.
ವಿಪರ್ಯಾಸವೆಂದರೆ ಇದೀಗ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಕೇವಲ 2 ನೇ ಬಾರಿ ನರ್ವಸ್ ನೈಂಟಿಗೆ ಔಟಾಗಿದ್ದಾರೆ. ಔಟ್ ಆದ ಬಳಿಕ ಕೊಹ್ಲಿ ತೀವ್ರ ನಿರಾಸೆಯಿಂದ ಬ್ಯಾಟ್ ಕೊಡವುತ್ತಾ ಪೆವಿಲಿಯನ್ ನತ್ತ ಮರಳಿದ್ದಾರೆ. ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿಗಳೂ ಹೃದಯವೇ ಬಾಯಿಗೆ ಬಂದಂತೆ ನಿರಾಸೆ ಅನುಭವಿಸಿದ್ದಾರೆ.
ವಿಶೇಷವೆಂದರೆ ಇಂದು ಕೊಹ್ಲಿಯನ್ನು 97 ರನ್ ಗೆ ಔಟ್ ಮಾಡಿದ್ದೂ ಇದೇ ಆದಿಲ್ ರಶೀದ್. ಅಂದು ರಾಹುಲ್ ಗೆ ನಿರಾಶೆ ಜತೆಗೆ ಶಾಕ್ ಕೊಟ್ಟಿದ್ದ ರಶೀದ್ ಇಂದು ಕೊಹ್ಲಿಗೂ ಅದೇ ಹತಾಶೆ ನೀಡಿದ್ದಾರೆ. ಸಾಮಾನ್ಯವಾಗಿ ಕೊಹ್ಲಿ 90 ರ ಆಸುಪಾಸಿಗೆ ಬಂದ ಮೇಲೆ, ಅಂದರೆ ಸೆಟ್ ಆದ ಮೇಲೆ ಔಟ್ ಆಗುವುದು ವಿರಳ. ಆದರೆ ಆದಿಲ್ ರಶೀದ್ ಇದಕ್ಕೇ ಫೇಮಸ್ಸು ಎಂಬವರಂತೆ ಅಂದು ರಾಹುಲ್ ಗೆ ಕಾಡಿದ ರೀತಿ ಇಂದು ಕೊಹ್ಲಿಗೆ ಕಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.