Select Your Language

Notifications

webdunia
webdunia
webdunia
webdunia

ಸೋಲಿನ ಜತೆಗೆ ಇಂಗ್ಲೆಂಡ್ ಕ್ರಿಕೆಟಿಗ ಸ್ಟುವರ್ಟ್ ಬ್ರಾಡ್ ಗೆ ಶಿಕ್ಷೆಯ ಬರೆ!

ಸ್ಟುವರ್ಟ್ ಬ್ರಾಡ್
ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಸೋಲಿನ ಜತೆಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಗೆ ಐಸಿಸಿ ಶಿಕ್ಷೆಯ ಬರೆ ಸಿಕ್ಕಿದೆ.

ತೃತೀಯ ಟೆಸ್ಟ್ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಪ್ರಚೋದನಕಾರಿ ವರ್ತನೆಗೆ ಐಸಿಸಿ ಪಂದ್ಯದ ಶುಲ್ಕದ ಶೇ.15 ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಿ ಶಿಕ್ಷೆ ವಿಧಿಸಿದೆ.

ಭಾರತದ ಮೊದಲ ಇನಿಂಗ್ಸ್ ನಲ್ಲಿ ರಿಷಬ್ ಪಂತ್ ರನ್ನು ಔಟ್ ಮಾಡಿದ ಬಳಿಕ ಬ್ರಾಡ್ ಅವರ ಬಳಿ ತೆರಳಿ ಪ್ರಚೋದನಕಾರಿಯಾಗಿ ಅವಹೇಳನ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ ಬ್ರಾಡ್ ಗೆ ಶಿಕ್ಷೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

‘ಅಪ್ಪ’ ಧೋನಿ ಒಳ್ಳೆಯವರಾ? ಕೆಟ್ಟವರಾ? ಪುತ್ರಿ ಜೀವಾ ಸ್ಮಾರ್ಟ್ ಉತ್ತರ ಏನಿದೆ ನೋಡಿ!