Select Your Language

Notifications

webdunia
webdunia
webdunia
webdunia

ಕೋಚ್ ರವಿಶಾಸ್ತ್ರಿಯೇ ಆದರೂ ಟೀಂ ಇಂಡಿಯಾ ತುಂಬಾ ಈಗ ರಾಹುಲ್ ದ್ರಾವಿಡ್ ಹುಡುಗರದ್ದೇ ಕಾರುಬಾರು!

ರಾಹುಲ್ ದ್ರಾವಿಡ್
ಮುಂಬೈ , ಶುಕ್ರವಾರ, 24 ಆಗಸ್ಟ್ 2018 (08:25 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಟೀಂ ಇಂಡಿಯಾದಲ್ಲಿ ಇದೀಗ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ಭಾರತ ಎ ತಂಡದ ಹುಡುಗರ ಸಂಖ್ಯೆಯೇ ಅಧಿಕವಾಗಿದೆ.

ಮುರಳಿ ವಿಜಯ್ ಮತ್ತು ಕುಲದೀಪ್ ಯಾದವ್ ಸ್ಥಾನಕ್ಕೆ ದ್ರಾವಿಡ್ ರ ಎ ತಂಡದ ಪೃಥ್ವಿ ಶಾ, ಹನುಮ ವಿಹಾರಿ ಆಯ್ಕೆಯಾಗುವುದರ ಮೂಲಕ ಈ ಸಂಖ್ಯಾಬಲ ಇನ್ನಷ್ಟು ಹೆಚ್ಚಿದೆ.

ಈಗಾಗಲೇ ದ್ರಾವಿಡ್ ಗರಡಿಯಲ್ಲಿ ಪಳಗಿದ ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ ಜತೆಗೆ ಇದೀಗ ಈ ಇಬ್ಬರು ಹೊಸ ಆಟಗಾರರೂ ಸೇರ್ಪಡೆಯಾಗಿದ್ದಾರೆ. ಭಾರತ ಎ ತಂಡದಲ್ಲಿ ಕಮಾಲ್ ಮಾಡಿದ್ದ ಈ ಆಟಗಾರರು ಟೀಂ ಇಂಡಿಯಾದಲ್ಲೂ ದ್ರಾವಿಡ್ ಹೇಳಿಕೊಟ್ಟ ಪಾಠವನ್ನು ಚೆನ್ನಾಗಿಯೇ ಒಪ್ಪಿಸುತ್ತಿದ್ದಾರೆ. ಅಂತೂ ದ್ರಾವಿಡ್ ತಮ್ಮ ಎ ತಂಡವನ್ನು ಚೆನ್ನಾಗಿ ಪಳಗಿಸಿದ್ದಾರೆಂಬುದಕ್ಕೆ ಇವರೇ ಸಾಕ್ಷಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಕಳಪೆ ಫಾರ್ಮ್ ನಿಂದಾಗಿ ಇಂಗ್ಲೆಂಡ್ ವಿರುದ್ಧ ಮುಂದಿನ ಟೆಸ್ಟ್ ಪಂದ್ಯಕ್ಕೆ ಸ್ಥಾನ ಕಳೆದುಕೊಂಡ ಟೀಂ ಇಂಡಿಯಾ ಆಟಗಾರರು