Select Your Language

Notifications

webdunia
webdunia
webdunia
webdunia

ಹೃತಿಕ್ ರೋಶನ್ ಜೊತೆ ಯಾರೂ ಕೂಡ ಸಿನಿಮಾ ಮಾಡಬಾರದು ಎಂದು ಕಂಗನಾ ಹೇಳಿದ್ಯಾಕೆ?

ಹೃತಿಕ್ ರೋಶನ್ ಜೊತೆ ಯಾರೂ ಕೂಡ ಸಿನಿಮಾ ಮಾಡಬಾರದು ಎಂದು ಕಂಗನಾ ಹೇಳಿದ್ಯಾಕೆ?
ಮುಂಬೈ , ಶನಿವಾರ, 13 ಅಕ್ಟೋಬರ್ 2018 (07:03 IST)
ಮುಂಬೈ : ಹೃತಿಕ್ ರೋಶನ್ ಜೊತೆ ‘ಕೈಟ್ಸ್’ ಹಾಗೂ ಕ್ರಿಶ್ 3 ಚಿತ್ರಗಳಲ್ಲಿ ನಟಿಸಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಇದೀಗ ನಟ ಹೃತಿಕ್ ರೋಶನ್ ಜೊತೆ ಇಂಡಸ್ಟ್ರೀಯ ಯಾರೂ ಕೂಡ ಸಿನಿಮಾ ಮಾಡಬಾರದು ಎಂದು ಹೇಳಿದ್ದಾರೆ.


ಇತ್ತೀಚೆಗೆ ನಟಿ ಕಂಗನಾ ಕ್ವೀನ್’ ಚಿತ್ರದ ನಿರ್ದೇಶಕ ವಿಕಾಸ್ ಬಾಹುಲ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆದರೆ ಇದೀಗ ಕಾಸ್ಟಿಂಗ್ ಕೌಚ್ ಬಗ್ಗೆ ಮಾಧ್ಯಮವೊದರಲ್ಲಿ ಮಾತನಾಡುತ್ತಿರುವಾಗ ಪರೋಕ್ಷವಾಗಿ ಹೃತಿಕ್ ರೋಶನ್ ಅವರನ್ನು ಟೀಕಿಸಿದ್ದಾರೆ.


ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸುವ ಅನೇಕರು ನಮ್ಮ ಇಂಡಸ್ಟ್ರಿಯಲ್ಲಿದ್ದಾರೆ. ಅಂತವರನ್ನು ಖಂಡಿತ ಶಿಕ್ಷೆಗೊಳಪಡಿಸಬೇಕು. ಕೆಲವರು ತಮ್ಮ ಪತ್ನಿಯರನ್ನು ಟ್ರೋಫಿಗಳಂತೆ ಇರಿಸಿಕೊಂಡು, ಯುವತಿಯರನ್ನು ಪ್ರೇಯಸಿಯರಂತೆ ಬಳಸಿಕೊಳ್ಳುತ್ತಾರೆ. ನನ್ನ ಪ್ರಕಾರ ಹೃತಿಕ್​ ಜೊತೆ ಇಂಡಿಸ್ಟ್ರಿಯ ಯಾರೂ ಕೂಡ ಸಿನೆಮಾ ಮಾಡಬಾರದು ಎಂದು ಕಂಗನಾ ಹೇಳಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕಿರುಕುಳದ ಆರೋಪದ ಹಿನ್ನಲೆ; ಹೌಸ್ ಫುಲ್ 4 ಚಿತ್ರದಿಂದ ಹಿಂದೆ ಸರಿದ ನಿರ್ದೇಶಕ ಸಾಜಿದ್ ಖಾನ್