Select Your Language

Notifications

webdunia
webdunia
webdunia
webdunia

ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ
ಮುಂಬೈ , ಗುರುವಾರ, 11 ಅಕ್ಟೋಬರ್ 2018 (13:37 IST)
ಮುಂಬೈ : ಇಂದು (ಅ.11) ಬಾಲಿವುಡ್ ನ ಹಿರಿಯ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇಂದು 76 ನೇ ವಸಂತಕ್ಕೆ ಕಾಲಿಟ್ಟ ಹಿರಿಯ ನಟನಿಗೆ ಬಾಲಿವುಡ್ ನ ಸಿನಿಮಾ ತಾರೆಯರು ಹಾಗೂ ಅಭಿಮಾನಿಗಳು ಶುಭಾಶಯವನ್ನು ತಿಳಿಸಿದ್ದಾರೆ.


ಆದರೆ ಇಂದು ಅವರು ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡುವುದಿಲ್ಲ ಎಂಬುದಾಗಿ ಬಿಗ್ ಬಿ ತಿಳಿಸಿದ್ದಾರೆ. ಕಾರಣ ಇತ್ತೀಚೆಗಷ್ಟೇ ಮಗಳು ಶ್ವೇತಾ ನಂದ ಅವರ ಮಾವ ರಾಜನ್ ನಂದ ತೀರಿಕೊಂಡಿದ್ದರು. ಆ ದುಃಖದಿಂದ ಕುಟುಂಬ ಸದಸ್ಯರು ಇನ್ನೂ ಹೊರಬಾರದ ಕಾರಣ ತಮ್ಮ ಹುಟ್ಟುಹಬ್ಬವನ್ನು ಆಚರಿಸದೆ ಇರಲು ನಿರ್ಧರಿಸಿದ್ದಾರೆ.


1969ರಲ್ಲಿ 'ಭವ ಶೋಮ್' ಚಿತ್ರದ ಕಲಾವಿದನಿಗೆ ತಮ್ಮ ಧ್ವನಿ ನೀಡುವ ಮೂಲಕ ತಮ್ಮ ಸಿನಿಮಾ ವೃತ್ತಿ ಜೀವನವನ್ನು ಆರಂಭಿಸಿದ ಬಿಗ್ ಬಿ ನಂತರ 'ಸೆವೆನ್ ಹಿಂದೂಸ್ಥಾನಿ'ಯಲ್ಲಿ ಮೊದಲ ಬಾರಿಗೆ ನಟಿಸುವುದರ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು. ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿ ಜನರ ಮೆಚ್ಚಿಗೆ ಪಡೆದ ಈ ನಟ ಅಪಾರ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ. ಸದ್ಯಕ್ಕೆ ಅವರು  'ಥಗ್ಸ್ ಆಫ್ ಹಿಂದುಸ್ತಾನ್', 'ಬ್ರಹ್ಮಾಸ್ತ್ರ', 'ಸೈರಾ ನರಸಿಂಹ ರೆಡ್ಡಿ', 'ಬದ್ಲಾ' ಮುಂತಾದ ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 
 

Share this Story:

Follow Webdunia kannada

ಮುಂದಿನ ಸುದ್ದಿ

ತನುಶ್ರೀ ಬೆಂಬಲಕ್ಕೆ ನಿಂತ ಮಹಿಳಾ ಆಯೋಗ; ನಾನಾಪಾಟೇಕರ್ ಗೆ ನೋಟಿಸ್ ಜಾರಿ