Publish Date: Fri, 12 Oct 2018 (10:40 IST)
Updated Date: Fri, 12 Oct 2018 (10:42 IST)
ಮುಂಬೈ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ತಿರುಚಿ ಪ್ರಸಾರ ಮಾಡಿದ್ದಕ್ಕೆ ಮಾಧ್ಯಮವೊಂದರ ವಿರುದ್ಧ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಸೈಬರ್ ಪೋಲಿಸರಿಗೆ ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮದವರೊಂದಿಗೆ ನಡೆಸಿದ್ದ ಸಂವಾದದ ವೇಳೆ ನಟ ಅಕ್ಷಯ್ ಕುಮಾರ್ ಅವರು ಬೇರೊಬ್ಬ ನಟಿಯ ಬಗ್ಗೆ ಮಾತನಾಡಿದರೆ ಅದನ್ನು ತನುಶ್ರೀ ದತ್ತಾ ಹಾಗೂ ನಾನಾ ಪಾಟೇಕರ್ ಪ್ರಕರಣದಲ್ಲಿ ತನುಶ್ರೀ ದತ್ತಾ ವಿರುದ್ಧ ಮಾತನಾಡಿದ್ದೇನೆ ಎಂಬಂತೆ ಎಡಿಟ್ ಮಾಡಿ ಪ್ರಸಾರ ಮಾಡಿದ್ದಾರೆ.
ಈ ಬಗ್ಗೆ ಗರಂ ಆದ ನಟ ಅಕ್ಷಯ್ ಸೈಬರ್ ಪೋಲಿಸರಿಗೆ ದೂರು ನೀಡಿ ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಅವರು ಕಂಪ್ಲೇಟ್ ದಾಖಲಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದ ಆ ಸೈಟ್ನಲ್ಲಿ ವಿಡಿಯೋ ಡಿಲೀಟ್ ಮಾಡಲಾಗಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.