Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಲೈಂಗಿಕ ಕಿರುಕುಳದ ಆರೋಪದ ಹಿನ್ನಲೆ; ಹೌಸ್ ಫುಲ್ 4 ಚಿತ್ರದಿಂದ ಹಿಂದೆ ಸರಿದ ನಿರ್ದೇಶಕ ಸಾಜಿದ್ ಖಾನ್

webdunia
ಶನಿವಾರ, 13 ಅಕ್ಟೋಬರ್ 2018 (06:59 IST)
ಮುಂಬೈ : ಮೂವರು ಮಹಿಳೆಯರು ನಿರ್ದೇಶಕ ಸಾಜಿದ್ ಖಾನ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಹಿನ್ನಲೆಯಲ್ಲಿ ಇದೀಗ ಸಾಜಿದ್ ಖಾನ್ ತಾವು ನಿರ್ದೇಶನ ಮಾಡುತ್ತಿರುವ ಹೌಸ್ ಫುಲ್ 4 ಚಿತ್ರದಿಂದ ಹಿಂದೆ ಸರಿದಿದ್ದಾರೆ.


ರಚೇಲ್​ ವೈಟ್​,  ಉಪ ನಿರ್ದೇಶಕಿ ಸಲೋನಿ ಚೋಪ್ರಾ ಮತ್ತು ಪತ್ರಕರ್ತೆ ಕರೀಷ್ಮಾ ಉಪಾಧ್ಯಾಯ ಸಾಜಿದ್​ ಖಾನ್​ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.  ಇದಕ್ಕೆ ಅಕ್ಷಯ್ ಕುಮಾರ್​ ಪತ್ನಿ ಟ್ವಿಂಕಲ್​ ಖನ್ನಾ ಸಹ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದರು. 


ಈ ಬಗ್ಗೆ ಬೇಸರಗೊಂಡ ನಿರ್ದೇಶಕ ಸಾಜಿದ್ ಖಾನ್ ಟ್ವೀಟರ್ ನಲ್ಲಿ ತಮ್ಮ ಮೇಲೆ ಕಿರುಕುಳ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ತಾವು ಮುಂಬರುವ ಬಹು ನಿರೀಕ್ಷಿತ ಚಿತ್ರ ಹೌಸ್​​ಫುಲ್​- 4ರ ನಿರ್ದೇಶನದಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದ್ದಾರೆ.


ಅಲ್ಲದೇ ತಾವು ಸತ್ಯ ಪ್ರೂವ್ ಮಾಡುವ ತನಕ ಮಾಧ್ಯಮದವರು ಯಾವುದೇ ತೀರ್ಪು ನೀಡಬಾರದು. ಸತ್ಯ ಹೊರ ಬರುವವರೆಗೂ ವೇಟ್​ ಮಾಡಿ ಎಂದು ಮನವಿ ಮಾಡಿದ್ದಾರೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಸೀಸನ್-6ನ ಬಿಗ್ ಬಾಸ್ ಮನೆಯಿಂದ ಹೊರಬಂದ ಶಾಕಿಂಗ್ ನ್ಯೂಸ್ ಏನು ಗೊತ್ತಾ?