Select Your Language

Notifications

webdunia
webdunia
webdunia
webdunia

ಮೀಟೂ ಅಭಿಯಾನಕ್ಕೆ ಕಾನೂನು ಬೆಂಬಲ ನೀಡಲು ಮುಂದಾದ ಕೇಂದ್ರ ಸರಕಾರ

ಮೀಟೂ ಅಭಿಯಾನಕ್ಕೆ ಕಾನೂನು ಬೆಂಬಲ ನೀಡಲು ಮುಂದಾದ ಕೇಂದ್ರ ಸರಕಾರ
ನವದೆಹಲಿ , ಶನಿವಾರ, 13 ಅಕ್ಟೋಬರ್ 2018 (14:29 IST)
ನವದೆಹಲಿ : ಮಹಿಳೆಯರು ತಮ್ಮ ಜೀವನದಲ್ಲಿ ನಡೆದ ಲೈಂಗಿಕ ಕಿರುಕುಳದ ಘಟನೆಗಳನ್ನು ಬಹಿರಂಗಪಡಿಸುವ  ಸಲುವಾಗಿ ಇರುವ ಮೀಟೂ(#MeToo) ಅಭಿಯಾನಕ್ಕೆ ಕಾನೂನು ಬೆಂಬಲ ನೀಡಲು ಕೇಂದ್ರ ಸಚಿವೆ ಮನೇಕಾ ಗಾಂಧಿ ನಿರ್ಧರಿಸಿದ್ದಾರೆ.


ಲೈಂಗಿಕ ಕಿರುಕುಳ ದೂರುಗಳ ವಿಚಾರಣೆಗೆ ಸಮಿತಿಯೊಂದನ್ನು ರಚಿಸಲು ಕೇಂದ್ರ ಸರಕಾರ ಮುಂದಾಗಿದ್ದು, ಆ ಮೂಲಕ  ಹಿರಿಯ ನ್ಯಾಯಮೂರ್ತಿಗಳು ಹಾಗೂ ಕಾನೂನು ತಜ್ಞರನ್ನೊಳಗೊಂಡ ಸಮಿತಿ ರಚನೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.


ಈ ಕುರಿತು ಮಾತನಾಡಿದ ಸಚಿವೆ ಮನೇಕಾ ಗಾಂಧಿ, ‘ಅವರ ಮಾತುಗಳನ್ನ ನಂಬುತ್ತೇನೆ. ಪ್ರತಿಯೊಂದು ದೂರಿನ ಹಿಂದಿರುವ ನೋವು ಮತ್ತು  ಯಾತನೆಯನ್ನು ನಾನು ಅರಿಯಬಲ್ಲೆ. #MeToo ಅಭಿಯಾನದಲ್ಲಿ ಹೊರಬರುವ ಎಲ್ಲಾ ದೂರುಗಳನ್ನ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲು ನಾನು ಪ್ರಸ್ತಾವನೆ ಮುಂದಿಡುತ್ತಿದ್ದೇನೆ,” ಎಂದು ತಿಳಿಸಿದ್ದಾರೆ.


ಮೀಟೂ ಹ್ಯಾಷ್ ಟ್ಯಾಗ್ ಮೂಲಕ ಈಗಾಗಲೇ ನಟರು, ನಿರ್ದೇಶಕರು, ಗಾಯಕರು ಹೀಗೆ ಅನೇಕ ಪುರುಷ ಸೆಲಬ್ರಿಟಿಗಳ ಕರಾಳ ಮುಖವನ್ನು ಮಹಿಳೆಯರು  ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜನಕ ರಾಜನ ಪಾತ್ರದಲ್ಲಿ ನಟಿಸಿದ ಕೇಂದ್ರ ಸಚಿವರ ಕಾಲೆಳೆದ ನೆಟ್ಟಿಗರು