Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಜನಕ ರಾಜನ ಪಾತ್ರದಲ್ಲಿ ನಟಿಸಿದ ಕೇಂದ್ರ ಸಚಿವರ ಕಾಲೆಳೆದ ನೆಟ್ಟಿಗರು

webdunia
ಶನಿವಾರ, 13 ಅಕ್ಟೋಬರ್ 2018 (14:27 IST)
ನವದೆಹಲಿ : ಕೇಂದ್ರ ಸಚಿವ ಡಾ.ಹರ್ಷವರ್ಧನ್ ಅವರು ನಾಟಕವೊಂದರಲ್ಲಿ ಜನಕ ರಾಜನ ಪಾತ್ರದಲ್ಲಿ ನಟಿಸಿದ ವಿಡಿಯೋ ವೈರಲ್ ಆಗಿದ್ದು, ಇದೀಗ ಅವರನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ.


ದೆಹಲಿಯಲ್ಲಿ ಶುಕ್ರವಾರ ಲವ-ಕುಶ ರಾಮ ಲೀಲಾ ನಾಟಕ ಪ್ರದರ್ಶವಿತ್ತು. ಅದರಲ್ಲಿ ಜನಕ ರಾಜನ ಪಾತ್ರ ನಿರ್ವಹಸಿದ ಸಚಿವ ಡಾ.ಹರ್ಷವರ್ಧನ್ ಅವರು ಸಿಂಹಾಸದ ಮೇಲೆ ಕುಳಿತು, ಸ್ವಯಂ ವರಕ್ಕೆ ಆಹ್ವಾನ ನೀಡುವ ದೃಶ್ಯದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


ಇದನ್ನು ನೋಡಿದ ಕೆಲವರು ಸಚಿವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದರೆ  ಇನ್ನೂ ಕೆಲವರು ನೀವು ಜನಕ ರಾಜನಾದರೆ ಬಿಹಾರದ ಬಿಜೆಪಿ ಮುಖಂಡ ಮನೋಜ್ ತಿವಾರಿ ಅವರು ರಾವಣ ಎಂದು ಕಾಲೆಳೆದಿದ್ದಾರೆ. ಅಷ್ಟೆ ಅಲ್ಲದೇ ಸುಬ್ರಮಣ್ಯಂ ಎಂಬವರು ಬಿಜೆಪಿ ಒಂದು ನಾಟಕದ ಕಂಪೆನಿ, ಎಲ್ಲರೂ ನಾಟಕಕಾರರೇ ಎಂದು ಬರೆದು ಹೀಯಾಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ಕರ್ನಾಟಕ ಯೋಜನೆ ಜಾರಿ