Publish Date: Sat, 13 Oct 2018 (06:49 IST)
Updated Date: Sat, 13 Oct 2018 (06:52 IST)
ಅಮೇರಿಕಾ : ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಆಡಳಿತ ನೀತಿಯ ಬಗ್ಗೆ ಹಲವರಿಗೆ ವಿರೋಧವಿದೆ. ಆದರೆ ವ್ಯಕ್ತಿಯೊಬ್ಬ ಅದನ್ನು ತೋರ್ಪಡಿಸಿದ ರೀತಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಗಾದ್ರೆ ಆತ ಮಾಡಿದ್ದಾದರೂ ಏನು ಗೊತ್ತಾ?
ಜಾಹೀರಾತು ಸಂಸ್ಥೆಯೊಂದರ ಮುಖ್ಯಸ್ಥ ಫಿಲ್ ಗೇಬಲ್ ಎಂಬಾತ ನ್ಯೂಯಾರ್ಕ್‍ನ ಬ್ರೂಕ್ಲಿನ್ ಎಂಬ ಪ್ರದೇಶದ ಅಲ್ಲಲ್ಲಿ ಟ್ರಂಪ್ ಪುತ್ಥಳಿಗಳನ್ನು ಇಟ್ಟು, ಅದರ ಕೆಳಗೆ “ಇಲ್ಲಿ ಮೂತ್ರ ಮಾಡಿ” ಎಂದು ಬರೆಸಿದ್ದಾನೆ. ಅಷ್ಟೇ ಅಲ್ಲದೇ ನಾಯಿಗಳನ್ನೂ ಸೆಳೆಯುವಂತಹ ವಸ್ತುಗಳನ್ನು ಈ ಫಲಕಗಳ ಬಳಿ ಸಿಂಪಡಿಸಿದ್ದಾನಂತೆ.
ಈ ವಿಚಾರವನ್ನು ಸ್ವತಃ ಆತನೇ ಹೇಳಿಕೊಂಡಿದ್ದಾನೆ. ಅಮೆರಿಕ ಅಧ್ಯಕ್ಷನಾಗಿ ಹಾಗೂ ವೈಯಕ್ತಿಕವಾಗಿ ಟ್ರಂಪ್ ತೋರಿರುವ ನಿಲುವುಗಳ ಬಗ್ಗೆ ನನ್ನ ಅಸಹನೆ-ಧಿಕ್ಕಾರವನ್ನು ಅಭಿವ್ಯಕ್ತಿಪಡಿಸುವ ಸಲುವಾಗಿ ಹೀಗೆ ಹಾಕಿಸಿದ್ದೇನೆ ಎಂದು ತಿಳಿಸಿದ್ದಾನೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.