Publish Date: Wed, 17 Oct 2018 (18:45 IST)
Updated Date: Wed, 17 Oct 2018 (18:47 IST)
ಮಗನ ಮೇಲೆ ತಂದೆಯೇ ಗುಂಡು ಹಾರಿಸಿದ ಪ್ರಕರಣ ನಡೆದಿದೆ.
ಕಲಬುರಗಿ ನಗರದ ಶೆಟ್ಟಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ವಿರೇಶ ಎಂಬಾತನ ಮೇಲೆ ಆತನ ತಂದೆ ಸೋಮಶೇಖರ್ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ವೀರೇಶನ ಭುಜಕ್ಕೆ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ವೀರೇಶ ಪುಂಡರೊಂದಿಗೆ ಕೂಡಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ದುಡ್ಡು ಕೊಡದೇ ಇದ್ರೆ ತಾಯಿ ಮತ್ತು ತಮ್ಮನನ್ನು ಕೊಲೆ ಮಾಡುವದಾಗಿ ಬೆದರಿಕೆ ಹಾಕಿದ್ದ. ರಾತ್ರಿ ಮನೆಯವರ ಜೊತೆ ಕುಡಿದು ಬಂದು ಗನ್ ತೆಗೆದುಕೊಂಡು ಕೊಲೆ ಮಾಡಲು ಯತ್ನ ನಡೆಸಿದ್ದ. ಹೀಗಾಗಿ ರಕ್ಷಣೆಗಾಗಿ ಮಗನ ಮೇಲೆ ಸೋಮಶೇಖರ್ ಗುಂಡು ಹಾರಿಸಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ ಹೇಳಿದ್ದಾರೆ.
ಗುಂಡು ಹಾರಿಸಿರುವ ಸೋಮಶೇಖರ್ 24 ವರ್ಷ ಬಿಎಸ್ ಎಫ್ ನಲ್ಲಿ ಕಾರ್ಯನಿರ್ವಯಿಸಿದ್ದ. ಈಗ ಕ್ಯಾಶ್ ಎಸ್ಕಾರ್ಟ್ ನಲ್ಲಿ ಕೆಲಸ ಮಾಡತ್ತಿದ್ದಾನೆ. ಸೋಮಶೇಖರ್ 6 ವರ್ಷಗಳಿಂದ ಡಬಲ್ ಬ್ಯಾರಲ್ ಲೈಸನ್ಸ್ ಗನ್ ಹೊಂದಿದ್ದಾರೆ ಎಂದು ಎಸ್ ಪಿ ತಿಳಿಸಿದ್ದಾರೆ. ಈ ಕುರಿತು ರಾಘವೇಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.