ರಾಖಿ ಸಾವಂತ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ತನುಶ್ರೀ ದತ್ತಾ

ಮಂಗಳವಾರ, 23 ಅಕ್ಟೋಬರ್ 2018 (09:47 IST)
ಮುಂಬೈ : ಬಾಲಿವುಡ್ ನಟಿ ರಾಖಿ ಸಾವಂತ್ ವಿರುದ್ಧ ನಟಿ ತನುಶ್ರೀ ದತ್ತಾ ಮಾನನಷ್ಟ  ಮೊಕದ್ದಮೆ ದಾಖಲಿಸಿದ್ದಾರೆ.


ಹೌದು. ಇತ್ತೀಚೆಗೆ ನಟಿ ತನುಶ್ರೀ ದತ್ತಾ 10 ವರ್ಷಗಳ ಹಿಂದೆ ಸಾಂಗ್ ವೊಂದರ ಶೂಟಿಂಗ್ ವೇಳೆ ಬಾಲಿವುಡ್ ನಟ ನಾನಾ ಪಾಟೇಕರ್ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪ ಮಾಡಿದ್ದರು.


ಈ ವಿಚಾರಕ್ಕೆ ಸಂಬಂಧಪಟ್ಟಂತೆ  ನಾನಾ ಪಾಟೇಕರ್ ಅವರ  ಬೆಂಬಲಕ್ಕೆ ನಿಂತಿದ್ದ ನಟಿ ರಾಖಿ ಸಾವಂತ್ ‘10 ವರ್ಷಗಳ ಕಾಲ ಆಕೆ ಕೋಮಾದಲ್ಲಿ ಇದ್ದಳಾ’ ಎಂದು ಹೇಳಿದ್ದರು. ಅಲ್ಲದೇ 'ತನುಶ್ರೀ ಒಬ್ಬ ಹುಚ್ಚಿ. ಅವರ ಕೈಯಲ್ಲಿ ಈಗ ಕೆಲಸ ಇಲ್ಲ. ಎಲ್ಲಾ ಹಣ ಮುಗಿಸಿಕೊಂಡಿದ್ದಾಳೆ. ಬಿಟ್ಟಿ ಪ್ರಚಾರಕ್ಕಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ' ಎಂದು ತನುಶ್ರೀ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಇದೀಗ ಈ ಬಗ್ಗೆ ತನುಶ್ರೀ ರಾಖಿ ಸಾವಂತ್ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಟಿ ರಕ್ಷಿತಾ ಮೇಲೆ ಕಿಡಿಕಾರಿದ ರವಿಚಂದ್ರನ್ ಅಭಿಮಾನಿಗಳು. ಕಾರಣವೇನು ಗೊತ್ತಾ?