ತಮ್ಮ ಮದುವೆ ಡೇಟ್ ರಿವಿಲ್ ಮಾಡಿದ ನಟಿ ದೀಪಿಕಾ ಪಡುಕೋಣೆ

ಸೋಮವಾರ, 22 ಅಕ್ಟೋಬರ್ 2018 (07:15 IST)
ಮುಂಬೈ : ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ-ರಣವೀರ್ ಮದುವೆ ಬಗ್ಗೆ ಈ ಹಿಂದೆ ಬಾರೀ ರೂಮರ್ಸ್ ಕೇಳಿಬಂದಿತ್ತು. ಆದರೆ ಇದೀಗ ಸ್ವತಃ ನಟಿ ದೀಪಿಕಾ ಅವರೇ ತಮ್ಮ ಮದುವೆ ಯಾವಾಗ ಎನ್ನುವುದನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.


ಹೌದು. ನಟಿ ದೀಪಿಕಾ ಹಾಗೂ ರಣವೀರ್ ಅವರು ಇದೇ ನವೆಂಬರ್ 14 ಹಾಗೂ 15ಕ್ಕೆ ಹಸೆಮಣೆ ಏರಲಿದ್ದಾರಂತೆ. ಈ ವಿಚಾರವನ್ನು ಖುದ್ದು ನಟಿ ದೀಪಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.


ನಿಮ್ಮೆಲರ ಜೊತೆ ಈ ವಿಷಯ ಹಂಚಿಕೊಳ್ಳಲು ನನಗೆ ಖುಷಿಯಾಗುತ್ತದೆ. ನನ್ನ ಕುಟುಂಬದ ಆಶೀರ್ವಾದದಿಂದ 2018 ನವೆಂಬರ್ 14 ಹಾಗೂ 15ಕ್ಕೆ ನನ್ನ ಮದುವೆ ನಿಗದಿಯಾಗಿದೆ. ನೀವು ಇಷ್ಟು ವರ್ಷ ನನಗೆ ಪ್ರೀತಿ ಹಾಗೂ ಸ್ನೇಹವನ್ನು ನೀಡಿದ್ದೀರಿ. ಅದಕ್ಕೆ ನಾನು ಅಭಾರಿಯಾಗಿರುತ್ತೇನೆ. ಪ್ರೀತಿ, ಸ್ನೇಹ ಹಾಗೂ ವಿಶ್ವಾಸದಿಂದ ಶುರುವಾಗುತ್ತಿರುವ ಈ ಸುಂದರವಾದ ಪಯಣಕ್ಕೆ ನಿಮ್ಮೆಲ್ಲರ ಆಶೀರ್ವಾದ ಬಯಸುತ್ತೇವೆ. ನಿಮ್ಮೆಲ್ಲರ ಪ್ರೀತಿಯ ದೀಪಿಕಾ ಹಾಗೂ ರಣವೀರ್” ಎಂದು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಶೃತಿ ಹರಿಹರನ್ ಬೆಂಬಲಕ್ಕೆ ನಿಂತ ನಟ ಪ್ರಕಾಶ್ ರೈ