ಮೀಟೂ ಎಂದ ನಟಿ ಆಲಿಯಾ ಭಟ್ ತಾಯಿ ಸೋನಿ ರಜ್ದಾನ್

ಗುರುವಾರ, 25 ಅಕ್ಟೋಬರ್ 2018 (10:30 IST)
ಮುಂಬೈ : ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ  ಬಾಲಿವುಡ್ ನಲ್ಲಿಯೂ ಮೀಟೂ ಅಭಿಯಾನದ ಮೂಲಕ ನಟಿಯರು  ಸಿನಿಮಾ ರಂಗದಲ್ಲಿ ತಮಗಾದ ನೋವನ್ನು ಹೇಳಿಕೊ‍ಳ್ಳುತ್ತಿದ್ದಾರೆ. ಅದೇರೀತಿ ಇದೀಗ ಬಾಲಿವುಡ್ ನಟಿ ಆಲಿಯಾ ಭಟ್ ತಾಯಿ ಸೋನಿ ರಜ್ದಾನ್ ತಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವುದರ ಬಗ್ಗೆ ಸ್ಪೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.


ಹೌದು, ಆಲಿಯಾ ಭಟ್ ಅವರ ತಾಯಿ ಸೋನಿ ರಜ್ದಾನ್ ಅವರು ಅಭಿನಯಿಸುತ್ತಿದ್ದ ಸಿನಿಮಾದ ಚಿತ್ರೀಕರಣದ ವೇಳೆ ವ್ಯಕ್ತಿಯೊಬ್ಬ ಅತ್ಯಾಚಾರವೆಸೆಯಲು ಪ್ರಯತ್ನ ಪಟ್ಟಿದ್ದನಂತೆ. ಈ ವಿಚಾರವನ್ನು ಸೋನಿ ರಜ್ದಾನ್ ಇಂಗ್ಲೀಷ್ ಪತ್ರಿಕೆಯೊಂದಿಗಿನ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಆದರೆ ಆತನ ಹೆಸರನ್ನ ಅವರು ಬಹಿರಂಗಪಡಿಸಿಲ್ಲ.


‘ಸಿನಿಮಾ ಇಂಡಸ್ಟ್ರಿಗೆ ಬಂದಾಗ ನನಗೆ ಯಾವುದೇ ರೀತಿ ಕಿರುಕುಳ ಎದುರಾಗಿಲ್ಲ. ಆದ್ರೆ, ಸಿನಿಮಾ ಶೂಟಿಂಗ್ ವೇಳೆ ವ್ಯಕ್ತಿಯೊಬ್ಬ ನನ್ನ ಮೇಲೆ ಅತ್ಯಾಚಾರವೆಸೆಯಲು ಪ್ರಯತ್ನ ಪ್ರಯತ್ನ ಪಟ್ಟ. ಆದ್ರೆ, ಅದು ಆಗಲಿಲ್ಲ. ನಾನು ಹೇಗೋ ತಪ್ಪಿಸಿಕೊಂಡೆ. ಆ ಸಮಯದಲ್ಲಿ ನಾನು ಆತನ ಹೆಸರು ಹೇಳಲಿಲ್ಲ. ಯಾಕಂದ್ರೆ, ಆ ವ್ಯಕ್ತಿಗೆ ಮದುವೆ ಆಗಿತ್ತು. ಆತನಿಗೊಂದು ಫ್ಯಾಮಿಲಿ ಇತ್ತು’ಎಂದು ಆಲಿಯಾ ಭಟ್ ತಾಯಿ ಸೋನಿ ರಜ್ದಾನ್ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಟಿ ಪ್ರಿಯಾಂಕಾ ಉಪೇಂದ್ರ ಫೈರ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಈ ನಟ ಕಾರಣವಂತೆ