Select Your Language

Notifications

webdunia
webdunia
webdunia
webdunia

ಇನ್ನೊಬ್ಬ ಕನ್ನಡ ನಟಿಯ ಲೈಂಗಿಕ ಕಿರುಕುಳ ಆರೋಪ ಇಂದು ಬಹಿರಂಗ! ಪ್ರಶಾಂತ್ ಸಂಬರಗಿ ನೀಡಲಿದ್ದಾರೆ ದಾಖಲೆ!

ಅರ್ಜುನ್ ಸರ್ಜಾ
ಬೆಂಗಳೂರು , ಗುರುವಾರ, 25 ಅಕ್ಟೋಬರ್ 2018 (09:34 IST)
ಬೆಂಗಳೂರು: ಮೀ ಟೂ ಅಭಿಯಾನದಲ್ಲಿ ಕನ್ನಡ ನಟ ಅರ್ಜುನ್ ಸರ್ಜಾ ಮೇಲೆ ಮಲಯಾಳಂ ಮೂಲದ ಶೃತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪ ಮಾಡಿದಂತೆ ಕನ್ನಡ ನಟಿಯೊಬ್ಬರಿಗೆ ಮಲಯಾಳಿ ನಟ ಮಾಡಿದ ಲೈಂಗಿಕ ಕಿರುಕುಳ ಆರೋಪ ಇಂದು ಬಹಿರಂಗ ಮಾಡುತ್ತೇವೆ ಎಂದು ಅರ್ಜುನ್ ಸರ್ಜಾ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇಂತಹದ್ದೊಂದು ಬಾಂಬ್ ಸಿಡಿಸಿದ್ದಾರೆ. ನಿನ್ನೆ ಸಂಜೆ ಶೃತಿ ಆಪ್ತ ರಾಮ್ ಎಂಬವರು ಲ್ಯಾಂಡ್ ಲೈನ್ ನಂಬರ್ ಒಂದರಿಂದ ಕರೆ ಮಾಡಿ ಮೃದುವಾಗಿ ಮಾತನಾಡಿ ಎಲ್ಲವನ್ನೂ ಮಾತುಕತೆ ಮೂಲಕ ಸಂಧಾನದ ಮೂಲಕ ಪರಿಹರಿಸೋಣ ಎಂದೂ ಆಫರ್ ನೀಡಿದ್ದಾಗಿ ಪ್ರಶಾಂತ್ ಬಹಿರಂಗಪಡಿಸಿದ್ದಾರೆ.

ಶೃತಿ ಆಪ್ತ ಎಂದು ಹೇಳಿಕೊಂಡಿದ್ದ ವ್ಯಕ್ತಿ ರಾಮ್ ರಾತ್ರಿ ಶೃತಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರನ್ನು ಭೇಟಿಯಾಗುತ್ತಾರೆ. ನೀವು ಅಂಬರೀಷ್ ಅವರನ್ನು ಭೇಟಿಯಾಗಿ. ಈ ವಿಚಾರವನ್ನು ದೊಡ್ಡದು ಮಾಡೋದು ಬೇಡ. ಸಂಧಾನದ ಮೂಲಕ ಎಲ್ಲವನ್ನೂ ಬಗೆಹರಿಸೋಣ ಎಂದು ಹೇಳಿರುವುದಾಗಿ ಪ್ರಶಾಂತ್ ಹೇಳಿಕೊಂಡಿದ್ದಾರೆ.

ಇದೀಗ ಶೃತಿ ಹರಿಹರನ್ ರಾಮ್ ಎನ್ನುವ ವ್ಯಕ್ತಿ ಬಗ್ಗೆ ಸ್ಪಷ್ಟನೆ ನೀಡಲೇಬೇಕಾದ ಪರಿಸ್ಥಿತಿ ಬಂದಿದೆ. ಮಲಯಾಳಿ ಮೂಲದ ನಟಿ ನಮ್ಮ ಕನ್ನಡ ನಟನ ಬಗ್ಗೆ ಈ ರೀತಿ ಆರೋಪ ಮಾಡಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯತ್ನ ನಡೆಸಿದ್ದಾರೆ. ಅದೇ ರೀತಿ ಮಲಯಾಳಿ ನಟರೊಬ್ಬರು ಕನ್ನಡ ನಟಿ ಮೇಲೆ ಮಾಡಿದ ಲೈಂಗಿಕ ಕಿರುಕುಳದ ಘಟನೆಯನ್ನೂ ಬಹಿರಂಗಪಡಿಸಲಿದ್ದೇವೆ. ಹೆಚ್ಚಿನ ಮಾಹಿತಿಗೆ ನಾನು ಇಂದು ನಡೆಸುವ ಪತ್ರಿಕಾಗೋಷ್ಠಿಯವರೆಗೂ ಕಾಯಿರಿ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

‘ಇಂಜಿನಿಯರ್’ ರೌಡಿಯ ಹಿಡಿಯಲು ಈ ಪೊಲೀಸರು ಎಂಥಾ ಸಾಹಸ ಮಾಡಿದರು ಗೊತ್ತಾ?!