Publish Date: Tue, 23 Oct 2018 (09:15 IST)
Updated Date: Tue, 23 Oct 2018 (09:17 IST)
ಬೆಂಗಳೂರು: ಮೀ ಟೂ ಅಭಿಯಾನದಡಿಯಲ್ಲಿ ಬಹುಭಾಷಾ ತಾರೆ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ನಟಿ ಶೃತಿ ಹರಿಹರನ್ ಪ್ರಕರಣದ ಸಂಧಾನಸಭೆ ಗುರುವಾರ ನಡೆಯುವ ಸಾಧ‍್ಯತೆಯಿದೆ.
ಇಬ್ಬರೂ ಮುಖಾಮುಖಿಯಾಗಿ ಕುಳಿತು ವಾಣಿಜ್ಯಮಂಡಳಿ ಮಧ್ಯಸ್ಥಿಕೆಯಲ್ಲಿ ಸಂಧಾನ ಸಭೆ ನಡೆಯಲಿದೆ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರು ಹೇಳಿದ್ದಾರೆ.
ಈ ಸಭೆಗೆ ಹಿರಿಯ ನಟ ಅಂಬರೀಷ್ ಮಧ್ಯಸ್ಥಿಕೆ ವಹಿಸಲಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಅಂಬರೀಷ್ ವಿದೇಶ ಪ್ರವಾಸದಲ್ಲಿದ್ದು, ಅವರು ಬಂದ ಬಳಿಕ ಸಭೆ ನಡೆಸಿ ಇಬ್ಬರನ್ನೂ ಕರೆಸಿ ಮಾತುಕತೆ ನಡೆಸುವ ಸಾಧ್ಯತೆಯಿದೆ. ಲೈಂಗಿಕ ಕಿರುಕುಳ ಆರೋಪ ಮಾಡಿದ ಶೃತಿ ಹರಿಹರನ್ ವಿರುದ್ಧ ನಟ ಅರ್ಜುನ್ ಸರ್ಜಾ ಮಾವ ಹಿರಿಯ ನಟ ರಾಜೇಶ್ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.