Select Your Language

Notifications

webdunia
webdunia
webdunia
webdunia

ನಟ ಅರ್ಜುನ್ ಸರ್ಜಾ ವಿರುದ್ಧ ಗೃಹಿಣಿಯೊಬ್ಬರಿಂದ ಲೈಂಗಿಕ ಕಿರುಕುಳದ ಆರೋಪ

ನಟ ಅರ್ಜುನ್ ಸರ್ಜಾ ವಿರುದ್ಧ ಗೃಹಿಣಿಯೊಬ್ಬರಿಂದ ಲೈಂಗಿಕ ಕಿರುಕುಳದ ಆರೋಪ
ಬೆಂಗಳೂರು , ಸೋಮವಾರ, 22 ಅಕ್ಟೋಬರ್ 2018 (06:48 IST)
ಬೆಂಗಳೂರು : ನಟಿ ಶೃತಿ ಹರಿಹರನ್ ಖ್ಯಾತ ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಅಭಿಯಾನದಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿ ಸ್ಯಾಂಡಲ್ ವುಡ್ ನಲ್ಲಿ ಬಾರೀ ಸಂಚಲನ ಮೂಡಿಸಿದ್ದರು. ಅದರ ಬೆನ್ನಲ್ಲೇ ಇದೀಗ ಗೃಹಿಣಿಯೊಬ್ಬರು ಕೂಡ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ  ಮಾಡಿದ್ದಾರೆ.


15 ವರ್ಷಗಳ ಹಿಂದೆ ಮೈಸೂರಿನಲ್ಲಿ ‘ಅರ್ಜುನುಡು’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸ್ಟೂಡೆಂಟ್ಸ್ ಕ್ರೌಡ್ ಸೀನ್ ನಲ್ಲಿ ಭಾಗವಹಿಸುವಾಗ ಅನುಚಿತ ವರ್ತನೆ ಮಾಡಿದ್ದಾರೆ ಎಂದು ಅರ್ಜುನ್ ಸರ್ಜಾ ವಿರುದ್ಧ ಗೃಹಿಣಿಯೊಬ್ಬರು ಆರೋಪ ಮಾಡಿದ್ದಾರೆ.


ಮೈಸೂರಿನಲ್ಲಿ ‘ಅರ್ಜುನುಡು’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ನನ್ನ ಜೊತೆ ಇಪ್ಪತ್ತು ವಿದ್ಯಾರ್ಥಿನಿಯರು ಪಾರ್ಟ್ ಟೈಂ ಕೆಲಸದಲ್ಲಿ ಶೂಟಿಂಗ್ ಸೀನ್ ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅರ್ಜುನ್ ಸರ್ಜಾ ಅವರು ಅಷ್ಟು ವಿದ್ಯಾರ್ಥಿನಿಯರ ನಂಬರ್ ಕೇಳಿದ್ದರು. ಅಷ್ಟೇ ಅಲ್ಲದೇ ಅವರ ರೂಂ ನಂಬರ್ ಕೊಟ್ಟು, ರೂಮಿಗೆ ಬನ್ನಿ, ರೆಸಾರ್ಟ್ ಇದೆ ನನ್ನದು ಅಂತಾ ಕರೆದಿದ್ದರು. ನನ್ನ ಅನೇಕ ಸ್ನೇಹಿತೆಯರು ಚಾನ್ಸ್ ಗಾಗಿ ಅರ್ಜುನ್ ಸರ್ಜಾ ರೂಮಿಗೆ ಹೋಗಿದ್ದರು. ಅಲ್ಲಿ ಅವರ ಜೊತೆ ಅರ್ಜುನ್ ಸರ್ಜಾ ಮಿಸ್ ಬಿಹೇವ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.


ಸುದೀಪ್ ಅಭಿನಯದ ‘ಸ್ಪರ್ಶ’ ಸಿನಿಮಾ ಮತ್ತು ಉಪೇಂದ್ರ ಸಿನಿಮಾದಲ್ಲೂ ಪಾಲ್ಗೊಂಡಿದ್ದೆವು. ಆದರೆ ಸರ್ಜಾ ಜೊತೆ ಕೆಟ್ಟ ಅನುಭವ ಆಗಿತ್ತು. ಆಮೇಲೆ ನಾವು ಇದನ್ನು ವಿರೋಧಿಸಿ ಸಿನಿಮಾ ಶೂಟಿಂಗ್ ಗೆ ಹೋಗುವುದನ್ನು ಬಿಟ್ಟೆವು ಎಂದು ಗೃಹಿಣಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಜುನ್ ಸರ್ಜಾ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಶೃತಿ ಮಾಡಿದ ಆರೋಪಗಳೇನು?