Publish Date: Thu, 25 Oct 2018 (08:40 IST)
Updated Date: Thu, 25 Oct 2018 (08:42 IST)
ಬೆಂಗಳೂರು: ಮೀ ಟೂ ಅಭಿಯಾನದಲ್ಲಿ ಬಹುಭಾಷಾ ತಾರೆ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಪಟ್ಟಂತೆ ಸಂಧಾನ ಸಭೆ ಇಂದು ಕರ್ನಾಟಕ ವಾಣಿಜ್ಯ ಮಂಡಳಿಯಲ್ಲಿ ನಡೆಯಲಿದೆ.
ಹಿರಿಯ ನಟ ಅಂಬರೀಷ್ ನೇತೃತ್ವದಲ್ಲಿ ಚಿತ್ರರಂಗದ ಪ್ರಮುಖರ ಸಮ್ಮುಖದಲ್ಲಿ ಶೃತಿ ಮತ್ತು ಅರ್ಜುನ್ ಸರ್ಜಾ ನಡುವೆ ಸಂಧಾನ ಮಾತಕತೆ ನಡೆಯಲಿದೆ.
ಆದರೆ ಈ ಸಂಧಾನ ಸಭೆಯಲ್ಲಿ ಶೃತಿ ಬೇಡಿಕೆಯೇನು ಗೊತ್ತಾ? ಮೂಲಗಳ ಪ್ರಕಾರ ತಾವು ಅಂದು ಮಾಡಿದ ತಪ್ಪಿಗೆ ಅರ್ಜುನ್ ಸರ್ಜಾ ಲಿಖಿತ ರೂಪದಲ್ಲಿ ತಪ್ಪೊಪ್ಪಿಗೆ ಪತ್ರ ಬರೆದುಕೊಡಬೇಕು ಎಂದು ಶೃತಿ ಬೇಡಿಕೆಯಿಡುವ ಸಾಧ್ಯತೆಯಿದೆ. ಒಂದು ವೇಳೆ ಅರ್ಜುನ್ ಇದಕ್ಕೆ ಒಪ್ಪದೇ ಹೋದಲ್ಲಿ ಕಾನೂನು ಮೂಲಕವೇ ಹೋರಾಟ ನಡೆಸಲು ಶೃತಿ ನಿರ್ಧರಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಅಂತೂ ಇಂದು ನಡೆಯಲಿರುವ ಸಭೆ ತೀವ್ರ ಕುತೂಹಲ ಮೂಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.