Publish Date: Sat, 27 Oct 2018 (18:17 IST)
Updated Date: Sat, 27 Oct 2018 (18:20 IST)
ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ನಲ್ಲಿ ಮೀ ಟೂ ಬಿರುಗಾಳಿ ಎಬ್ಬಿಸಿದೆ. ಮೀ ಟೂ ಚಳುವಳಿ ಕುರಿತು ಸಿಎಂ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮೀ ಟೂ ಕುರಿತು ತಮಗೆ ಗೊತ್ತಿಲ್ಲ. ಹೀಗಂತ ಪ್ರತಿಕ್ರಿಯೆ ನೀಡಿದರು.
ಮೀ ಟೂ ಅಭಿಯಾನ ಹಾಗೂ ಪ್ರಸ್ತುತ ಅದರ ಬೆಳವಣಿಗೆ ಕುರಿತು ಮುಖ್ಯಮಂತ್ರಿಯ ಗಮನವನ್ನು ಮಾಧ್ಯಮದವರು ಸೆಳೆದರು. ಆಗ, ಮಾಡುವುದಕ್ಕೆ ನನಗೆ ಬೇರೆ ಕೆಲಸ ಇದೆ. ಮೀ ಟೂ ಬಗ್ಗೆ ಅದೆಲ್ಲಾ ಗೊತ್ತಿಲ್ಲ ಎಂದರು.
ಈ ಮೀ ಟೂ ಎಲ್ಲಾ ಗೊತ್ತಿಲ್ಲ ಎಂದು ಸಿಎಂ ಹೇಳುತ್ತಿದ್ದಂತೆ ಸುತ್ತಲು ಇದ್ದ ಜನರು ನಗೆಗಡಲಲ್ಲಿ ತೇಲಿದರು.