Publish Date: Sat, 27 Oct 2018 (10:06 IST)
Updated Date: Sat, 27 Oct 2018 (10:11 IST)
ಬೆಂಗಳೂರು: ಮೀ ಟೂ ಅಭಿಯಾನ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಹಿನ್ನಲೆಯಲ್ಲಿ ಹರ್ಷಿಕಾ ಪೂಣಚ್ಚ ಮತ್ತೊಂದು ಸ್ಪೋಟಕ ಟ್ವೀಟ್ ಮಾಡಿದ್ದಾರೆ.
ನನ್ನ 10 ವರ್ಷಗಳ ಕೆರಿಯರ್ ನಲ್ಲಿ ಹಲವು ಬಾರಿ ನನಗೂ ಮೀ ಟೂ ಅನುಭವ ಆಗಿತ್ತು. ಹಲವು ಬಾರಿ ಕಮಿಟ್ ಆಗುವಂತೆ ಕೇಳಿಕೊಂಡಾಗ ನಿರಾಕರಿಸಿದ್ದಕ್ಕೆ ಹಲವು ದಿಗ್ಗಜ ನಟರೊಂದಿಗೆ ನಟಿಸುವ ಅವಕಾಶ ಕಳೆದುಕೊಂಡೆ ಎಂದು ಹರ್ಷಿಕಾ ಟ್ವೀಟ್ ಮೂಲಕ ಹೇಳಿದ್ದಾರೆ.
ಶೃತಿ ಹರಿಹರನ್ ಪ್ರಕರಣ ಬಯಲಾಗುತ್ತಿದ್ದಂತೆ ಟ್ವೀಟ್ ಮಾಡಿದ್ದ ಹರ್ಷಿಕಾ ಕೆಲವು ನಟಿಯರು ಗಾಂಜಾ ಸೇವಿಸುವುದನ್ನೂ ನೋಡಿದ್ದೇನೆ ಎಂದೆಲ್ಲಾ ಹೇಳಿದ್ದರು. ಇದೀಗ ಮತ್ತೆ ನಟಿಯರು ಮಾಡುತ್ತಿರುವ ಆರೋಪದ ವಿರುದ್ಧವಾಗಿ ಹರ್ಷಿಕಾ ಹೇಳಿಕೆ ನೀಡಿದ್ದಾರೆ.
ನಾನು ಹೀಗಿರುವ ಕಾರಣ ಯಾರೂ ನನ್ನ ಬಗ್ಗೆ ಬೆರಳು ತೋರಿಸುವಂತಿಲ್ಲ. ನಾನು ಪ್ಯೂರ್ ಆಗಿದ್ದೇನೆ. ಯಾರೂ ನಿಮಗೆ ಇಷ್ಟಪಡದ ಕೆಲಸ ಮಾಡಲು ಬಲವಂತ ಮಾಡಲ್ಲ. ನಿಮಗೆ ಇಷ್ಟವಿಲ್ಲದಿದ್ದರೆ ನೋ ಎಂದು ಹೇಳಿ ಎಂದು ಹರ್ಷಿಕಾ ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.