ಜಮಖಂಡಿ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ನಿರ್ಬಂಧಿತ ಪ್ರದೇಶದಲ್ಲಿ ಪಕ್ಷದ ಬಾವುಟ, ಶಾಲು ಹಿಡಿದು ಪ್ರಭಾವ ಬೀರುವ ಪ್ರಯತ್ನ ನಡೆಸಲಾಗಿದೆ.
ಸ್ವತಃ ಡಿಸಿ, ಎಸ್ಪಿ ಕಾರ್ಯಕರ್ತರನ್ನು ಹಿಡಿದು, ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ. ಜಮಖಂಡಿ ತಾಲೂಕು ಪಂಚಾಯಿತಿ ಬೂತ್ ಸಂಖ್ಯೆ 125 ರಲ್ಲಿ ಘಟನೆ ನಡೆದಿದೆ. ಡಿಸಿ ಕೆ.ಜಿ.ಶಾಂತಾರಾಮ್ ಹಾಗೂ ಎಸ್ಪಿ ಸಿ.ಬಿ.ರಿಷ್ಯಂತ ನೀಡಿದ ದಿಢೀರ್ ಭೇಟಿ ವೇಳೆ, ಮತಕೇಂದ್ರದ ನೂರು ಮೀಟರ್ ಒಳಗಡೆ ರಾಜಕೀಯ ಪಕ್ಷಗಳ ಚಿಹ್ನೆ ಪ್ರದರ್ಶನ, ಪ್ರತ್ಯಕ್ಷ ವಾಗಿ ಚಿಹ್ನೆ ತೋರಿಸಿ ಮತಯಾಚನೆ ಮಾಡಿದ ಆರೋಪ ಕೇಳಿಬಂದಿದೆ.
ಪರಿಶೀಲನೆ ನಡೆಸಿ ಎರಡೂ ಪಕ್ಷಗಳ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಕೆ.ಜೆ.ಶಾಂತಾರಾಂ ಸೂಚನೆ ನೀಡಿದ್ದಾರೆ.
ಸದ್ಯಕ್ಕೆ ಇಬ್ಬರನ್ನು ವಶಕ್ಕೆ ಪಡೆದು ಠಾಣೆಗೆ ಪೊಲೀಸರು ಕರೆದೊಯ್ದಿದ್ದಾರೆ. ಚುನಾವಣಾ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಟಾಧಿಕಾರಿಯು ಇನ್ಸಪೆಕ್ಟರ್ ಓರ್ವರನ್ನ ತರಾಟೆಗೆ ತೆಗೆದುಕೊಂಡ ನಡೆಯಿತು.
ಬೆಳಗ್ಗೆ ಇದೇ ಮತಗಟ್ಟೆಯಲ್ಲಿ ಮತದಾನ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ, ಆ ವೇಳೆ ಅವರೊಂದಿಗೆ ಬಂದಿದ್ದ ಬೆಂಬಲಿಗರು ಪಕ್ಷದ ಶಾಲು ಹಾಕಿದ್ರು. ಆ ಕಾರಣಕ್ಕೆ ಅವರ ಮೇಲೆಯೂ ಪ್ರಕರಣ ದಾಖಲಿಸಲು ಚುನಾವಣಾಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದ್ದಾರೆ.