Publish Date: Sat, 03 Nov 2018 (15:32 IST)
Updated Date: Sat, 03 Nov 2018 (15:33 IST)
ಮಂಡ್ಯ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಸಚಿವ ಡಿಸಿ ತಮ್ಮಣ್ಣ ಮತದಾನ ಮಾಡಿದರು.
ಸಾರಿಗೆ ಸಚಿವ ತಮ್ಮಣ್ಣ ಅವ್ರೊಂದಿಗೆ ಆಗಮಿಸಿ ನಟ ಅಂಬರೀಶ್ ತಮ್ಮ ಮತಚಲಾಯಿಸಿದರು. ಸ್ವಗ್ರಾಮ ದೊಡ್ಡರಸಿನಕೆರೆಯಲ್ಲಿ ಅಂಬಿ ಮತದಾನ ಮಾಡಿದರು.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯ ಮತಗಟ್ಟೆ ಸಂಖ್ಯೆ 164ರಲ್ಲಿ ಅಂಬರೀಶ್ ಮತದಾನ ಮಾಡಿದರು. ಇದೇ ಗ್ರಾಮದ ಮತಗಟ್ಟೆ ಸಂಖ್ಯೆ 166ರಲ್ಲಿ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಮತಚಲಾವಣೆ ಮಾಡಿದರು.
ದೊಡ್ಡರಸಿನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬರೀಶ್ ಹಾಗೂ ಸಚಿವ ಡಿ.ಸಿ ತಮ್ಮಣ್ಣ ಮತಚಲಾವಣೆ ಮಾಡಿದರು.