Select Your Language

Notifications

webdunia
webdunia
webdunia
webdunia

ಮದುವೆಯಾಗಲು ಒಪ್ಪದ 9 ನೇ ತರಗತಿ ವಿದ್ಯಾರ್ಥಿನಿಯ ಕತ್ತು ಸೀಳಿದ ಶಿಕ್ಷಕ

ಮದುವೆಯಾಗಲು ಒಪ್ಪದ 9 ನೇ ತರಗತಿ ವಿದ್ಯಾರ್ಥಿನಿಯ ಕತ್ತು ಸೀಳಿದ  ಶಿಕ್ಷಕ
ನವದೆಹಲಿ , ಭಾನುವಾರ, 4 ನವೆಂಬರ್ 2018 (09:09 IST)
ನವದೆಹಲಿ: ತನ್ನನ್ನು ಮದುವೆಯಾಗಲು ಒಪ್ಪದ 9 ನೇ ತರಗತಿಯ ವಿದ್ಯಾರ್ಥಿನಿಯನ್ನು ಶಿಕ್ಷಕನೇ ಕತ್ತು ಸೀಳಿ ಕೊಲೆಗೈಯಲು ಯತ್ನಿಸಿದ ಘಟನೆ ಆಂಧ್ರಪ್ರದೇಶದ ಕುರ್ನೂಲ್ ನಲ್ಲಿ ನಡೆದಿದೆ.

ಅದೃಷ್ಟವಶಾತ್ ವಿದ್ಯಾರ್ಥಿನಿ ಬದುಕುಳಿದಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಕೆಯ ಕೂಗು ಕೇಳಿ ನೆರೆ ಹೊರೆಯವರು ಈಕೆಯನ್ನು ರಕ್ಷಿಸಿದ್ದಲ್ಲದೆ, ಆರೋಪಿಯನ್ನು ಪೊಲೀಸರಿಗೊಪ್ಪಿಸಿದ್ದಾರೆ.

ಆರೋಪಿ ವಿದ್ಯಾರ್ಥಿನಿಯ ಹಿಂದಿ ಶಿಕ್ಷಕನಾಗಿದ್ದು, ಕಳೆದ ಒಂದು ವರ್ಷದಿಂದ ಬಾಲಕಿಯನ್ನು ತನಗೆ ಮದುವೆ ಮಾಡಿಕೊಡುವಂತೆ ಆಕೆಯ ಪೋಷಕರ ಮೇಲೂ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. 30 ವರ್ಷದ ಶಿಕ್ಷಕ ಇದೀಗ ಪೊಲೀಸರ ವಶದಲ್ಲಿದ್ದು, ವೃತ್ತಿಯಿಂದಲೂ ಅಮಾನತುಗೊಳಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಕಾರು ಅಪಘಾತ ಪ್ರಕರಣ: ಕ್ರಮಕ್ಕೆ ಮನವಿ