Publish Date: Fri, 02 Nov 2018 (09:02 IST)
Updated Date: Fri, 02 Nov 2018 (09:04 IST)
ಮಹಾರಾಷ್ಟ್ರ: ಗಂಡನೊಂದಿಗೆ ಜಗಳವಾಡಿ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಇಲ್ಲೊಬ್ಬ ಮಹಾತಾಯಿ ತನ್ನ ಇಬ್ಬರು ಅಪ್ರಾಪ್ತ ಮಕ್ಕಳನ್ನೇ ನೀರಿಗೆಸೆದು ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ದೀಪಾಲಿ ಆಮ್ಟೆ ಎಂಬಾಕೆ ಆರೋಪಿ. ಗಂಡ ತನ್ನ ನಡತೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಜಗಳವಾಡುತ್ತಿದ್ದನಂತೆ. ಅದೇ ಕಾರಣಕ್ಕೆ ಇಬ್ಬರೂ ಜಗಳವಾಡಿದ ಬಳಿಕ ಕೋಪದ ಕೈಗೆ ಬುದ್ಧಿ ಕೊಟ್ಟ ದೀಪಾಲಿ ಇಬ್ಬರು ಹೆಣ್ಣು ಮಕ್ಕಳನ್ನು ಗಂಡ ಮನೆಯಿಂದ ಹೊರ ನಡೆದ ಬಳಿಕ ನೀರಿನ ಟ್ಯಾಂಕ್ ಗೆ ಎಸೆದಿದ್ದಾಳೆ.
ಬಳಿಕ ಸ್ಥಳದಿಂದ ಪರಾರಿಯಾಗಿದ್ದಾಳೆ. ಪತಿ ಮನೆಗೆ ಬಂದಾಗ ತನ್ನಿಬ್ಬರು ಮಕ್ಕಳ ಮೃತದೇಹ ಟ್ಯಾಂಕ್ ನಲ್ಲಿರುವುದು ನೋಡಿ ಆಘಾತಗೊಂಡು ಪೊಲೀಸರಿಗೆ ದೂರು ನೀಡಿದ್ದಾನೆ. ಇದೀಗ ಪೊಲೀಸರು ತಾಯಿ ದೀಪಾಲಿಯನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.