Select Your Language

Notifications

webdunia
webdunia
webdunia
webdunia

ಮನೆಗೆ ತಡವಾಗಿ ಬಂದಿದ್ದೇಕೆ ಎಂದು ಪ್ರಶ್ನಿಸಿದ್ದಕ್ಕೆ ವಿಷ ಕುಡಿದ ಯುವತಿ

ಆತ್ಮಹತ್ಯೆ
ಛಂಡೀಘಡ , ಗುರುವಾರ, 1 ನವೆಂಬರ್ 2018 (09:03 IST)
ಛಂಡೀಘಡ: ಇತ್ತೀಚೆಗೆ ಆತ್ಮಹತ್ಯೆ ಮಾಡಲು ಯುವ ಜನಾಂಗಕ್ಕೆ ಕಾರಣಗಳೇ ಬೇಕಿಲ್ಲ. ಅಂತಹದ್ದೇ ಘಟನೆ ಛಂಡೀಘಡದಲ್ಲಿ ನಡೆದಿದೆ.

17 ವರ್ಷದ ಯುವತಿಯೊಬ್ಬಳು ಪೋಷಕರು ತಡವಾಗಿ ಮನೆಗೆ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹರ್ಯಾಣದ ಸೋನಾಪೇಟ್ ಎಂಬಲ್ಲಿ ಈ ಘಟನೆ ನಡೆದಿದೆ.

ಆದರೆ ಸ್ಥಳೀಯರು ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸುವಾಗ ಕುಟುಂಬಸ್ಥರು ಯುವತಿಯ ಅಂತಿಮ ಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದರು. ಬಳಿಕ ಯುವತಿಯ ಮೃತದೇಹವನ್ನು ವಶಕ್ಕೆ ಪಡೆದ ಪೊಲೀಸರು ಆಕೆಯ ಕರುಳಿನ ಮಾದರಿಯನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದರ ವರದಿ ಬಂದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಜನಾರ್ಧನ ರೆಡ್ಡಿ ವಿರುದ್ದ ಇಂದು ಡಿಕೆಶಿ ಬಾಂಬ್: ಡಿಕೆಶಿಗೆ ಜನಾರ್ಧನ ರೆಡ್ಡಿ ತಿರುಗೇಟು