ಜನಾರ್ಧನ ರೆಡ್ಡಿ ವಿರುದ್ದ ಇಂದು ಡಿಕೆಶಿ ಬಾಂಬ್: ಡಿಕೆಶಿಗೆ ಜನಾರ್ಧನ ರೆಡ್ಡಿ ತಿರುಗೇಟು

ಗುರುವಾರ, 1 ನವೆಂಬರ್ 2018 (07:49 IST)
ಬೆಂಗಳೂರು: ಬಳ್ಳಾರಿ ಲೋಕಸಭೆ ಉಪಚುನಾವಣೆ ಕಣ ರಂಗೇರುತ್ತಿದ್ದು, ಇಂದು ಮಾಜಿ ಸಚಿವ, ಬಳ್ಳಾರಿಯ ಪ್ರಬಲ ನಾಯಕ ಜನಾರ್ಧನ ರೆಡ್ಡಿ ವಿರುದ್ಧ ಸಚಿವ ಡಿಕೆ ಶಿವಕುಮಾರ್ ಮಹತ್ವದ ದಾಖಲೆ ಬಿಡುಗಡೆ ಮಾಡಲಿದ್ದಾರಂತೆ.

ಇಂದು ಡಿಕೆ ಶಿವಕುಮಾರ್ ಪತ್ರಿಕಾಗೋಷ್ಠಿ ನಡೆಸಿ ಜನಾರ್ಧನ ರೆಡ್ಡಿ ಅಕ್ರಮಗಳ ಕುರಿತು ಮಹತ್ವದ ದಾಖಲೆ ಮಾಡುತ್ತೇನೆ ಎಂದು ಘೋಷಿಸಿದ್ದಾರೆ. ಅತ್ತ ಜನಾರ್ಧನ ರೆಡ್ಡಿ ಕೂಡಾ ಇದಾದ ಬಳಿಕ ಮತ್ತೊಂದು ಸುದ್ದಿಗೋಷ್ಠಿ ನಡೆಸಿ ಡಿಕೆ ಶಿವಕುಮಾರ್ ವಿರುದ್ಧ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.

ಹೀಗಾಗಿ ಇಂದು ನಡೆಯಲಿರುವ ಎರಡು ಪತ್ರಿಕಾಗೋಷ್ಠಿಗಳು ಬಳ್ಳಾರಿ ಲೋಕಸಭೆ ಉಪಚುನಾವಣೆ ಮೇಲೆ ಪರಿಣಾಮ ಬೀರುವುದು ಖಚಿತ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದು ನಡೆಯಬೇಕಿದ್ದ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭ ರದ್ದು