Publish Date: Wed, 31 Oct 2018 (09:00 IST)
Updated Date: Wed, 31 Oct 2018 (09:03 IST)
ನವದೆಹಲಿ: ವಿನಾಕಾರಣ ತಮ್ಮ ಹೆಸರನ್ನು ಪನಾಮಾ ಹಗರಣದಲ್ಲಿ ಎಳೆದು ತಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪುತ್ರ ಕಾರ್ತಿಕಿ ಚೌಹಾಣ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಇಲ್ಲಿನ ರಾಜಕೀಯ ಸಮಾವೇಶದಲ್ಲಿ ಮಾತನಾಡುವಾಗ ರಾಹುಲ್ ಪನಾಮಾ ಪೇಪರ್ ಲೀಕ್ ಬಗ್ಗೆ ತಮ್ಮ ಹೆಸರನ್ನು ಉಲ್ಲೇಖಿಸಿದ್ದಾರೆ. ಇದು ದುರುದ್ದೇಶಪೂರಿತ ಆಕ್ಷೇಪಾರ್ಹ ಹೇಳಿಕೆ ಎಂದು ಕಾರ್ತಿಕಿ ಪರ ವಕೀಲರು ಹೇಳಿದ್ದಾರೆ.
ಪನಾಮಾ ಹಗರಣದಲ್ಲಿ ಮಧ್ಯಪ್ರದೇಶ ಸಿಎಂ ಪುತ್ರನ ಹೆಸರು ಕೇಳಿಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಹುಲ್ ಗಾಂಧಿ ಭಾಷಣದ ನಡುವೆ ಹೇಳಿದ್ದರು. ಈ ಹೇಳಿಕೆ ಇದೀಗ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.