ಜನಾರ್ಧನ ರೆಡ್ಡಿ ವ್ಯಂಗ್ಯಕ್ಕೆ ದೇಶಪಾಂಡೆ ಟಾಂಗ್

ಬುಧವಾರ, 31 ಅಕ್ಟೋಬರ್ 2018 (15:11 IST)
ಮಾಜಿ ಸಿಎಂ ಸಿದ್ದರಾಮಯ್ಯನವರ ಪುತ್ರನ ಸಾವಿನ ಬಗ್ಗೆ ಜನಾರ್ದನ ರೆಡ್ಡಿ ಮಾಡಿರುವ ವ್ಯಂಗ್ಯಕ್ಕೆ ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದು, ರೆಡ್ಡಿಗೆ ಟಾಂಗ್ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ  ಮಾತನಾಡಿರುವ ಆರ್.ವಿ.ದೇಶಪಾಂಡೆ, ಇಂತಹ ಹೇಳಿಕೆಯನ್ನ ಯಾರೇ ಆದರು ನೀಡಬಾರದು. ಪುತ್ರ ಶೋಕ ಅನ್ನುವುದು ತುಂಬಾ ನೋವಿನ ಸಂಗತಿ. ಇಂತಹ ವಿಷಯದಲ್ಲಿ ಟೀಕೆ ಮಾಡುವುದು ರಾಜಕೀಯವಾಗಿ ಒಳ್ಳೆಯ ಬೆಳವಣಿಗೆಯಲ್ಲ. ಉಪಚುನಾವಣೆಯಲ್ಲಿ ವ್ಯಕ್ತಿಗತ ಟೀಕೆಗೆ ರೆಡ್ಡಿ ಇಳಿದಿದ್ದಾರೆ.
ಇದು ಸಹ ಒಳ್ಳೆಯ ಬೆಳವಣಿಗೆಯಲ್ಲ ಎಂದಿದ್ದಾರೆ.

ಅಭಿವೃದ್ಧಿಯ ಬಗ್ಗೆ, ಕೆಲಸ ಆಗದಿರುವ ಬಗ್ಗೆ ಚರ್ಚಿಸಲಿ. ಅದನ್ನ ಬಿಟ್ಟು ವೈಯಕ್ತಿಕ ಟೀಕೆ ಸರಿಯಾದುದಲ್ಲ.
ಕುಮಾರ ಬಂಗಾರಪ್ಪ ಹೇಳಿಕೆ ನೀಡಿದ್ದು, ಮೀ ಟೂ  ವಿಷಯಕ್ಕೆ ಸಂಭಂದಿಸಿ ಮುಖ್ಯಮಂತ್ರಿ ಬಗ್ಗೆ ಮಾತನಾಡುವುದು ಸರಿಯಲ್ಲ. ಕುಮಾರ ಬಂಗಾರಪ್ಪಗೆ ರಾಜಕೀಯ ಭವಿಷ್ಯವಿದೆ. ಕುಮಾರ ಬೇಡವಾದ ಶಬ್ದಗಳನ್ನು ರಾಜಕೀಯವಾಗಿ ಬಳಸುವುದು ಸೂಕ್ತವಲ್ಲ ಎಂದರು.

ಉಪಚುನಾವಣೆಯಲ್ಲಿ ಐದು ಕ್ಷೇತ್ರದಲ್ಲೂ ಮೈತ್ರಿ ಪಕ್ಷಗಳು ಗೆಲುವನ್ನ ಸಾಧಿಸುತ್ತೇವೆ ಎಂದು ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದರು ಆರ್. ವಿ. ದೇಶಪಾಂಡೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹಣಕ್ಕಾಗಿ ಅಪಹರಣ: ಮೂವರು ಆರೋಪಿಗಳು ಅಂದರ್