Publish Date: Tue, 30 Oct 2018 (11:00 IST)
Updated Date: Tue, 30 Oct 2018 (11:01 IST)
ಬಳ್ಳಾರಿ: ದೇಶದಲ್ಲಿ ಜಾತ್ಯಾತೀತ ವ್ಯವಸ್ಥೆ ಒಗ್ಗೂಡಬೇಕಿರುವುದರಿಂದ ಕಾಂಗ್ರೆಸ್ ಜತೆ ಸೇರಿ ಪ್ರಾದೇಶಿಕ ಪಕ್ಷಗಳು ಚುನಾವಣೆ ಎದುರಿಸಬೇಕಿದೆ. ಹೀಗಾಗಿ ಕಾಂಗ್ರೆಸ್ ಜತೆ ಸೇರಿ ಪ್ರಚಾರ ಮಾಡುತ್ತಿದ್ದೇವೆ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಸಿದ್ದರಾಮಯ್ಯ ಸೂಚಿಸಿದರೆ ಜಮಖಂಡಿಗೆ ಹೋಗಿ ಪ್ರಚಾರ ಮಾಡುವೆ. ಜಾತ್ಯಾತೀತ ವ್ಯವಸ್ಥೆ ಉಳಿಯಬೇಕಿದ್ದರೆ ಕಾಂಗ್ರೆಸ್ ಜತೆ ಹೋಗುವುದು ಅನಿವಾರ್ಯ. ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ತೀರ್ಮಾನವೇ ಅಂತಿಮ ಎಂದು ದೇವೇಗೌಡರು ಹೇಳಿದ್ದಾರೆ.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೂಚಿಸಿದ್ದಕ್ಕೆ ಎಚ್ ಡಿಕೆ ಸಿಎಂ ಆದರು. ಮುಂದೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಕೈ ಜೋಡಿಸುತ್ತೇವೆ. ಒಂದು ವೇಳೆ ರಾಹುಲ್ ಪ್ರಧಾನಿಯಾಗುತ್ತಾರೆ ಎಂದಾದರೆ ಅದಕ್ಕೆ ನಮ್ಮ ಸಹಮತವಿದೆ ಎಂದೂ ಗೌಡರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.