Publish Date: Tue, 30 Oct 2018 (09:09 IST)
Updated Date: Tue, 30 Oct 2018 (09:12 IST)
ನವದೆಹಲಿ: ರಾಹುಲ್ ಗಾಂಧಿ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಜನಿವಾರಧಾರಿ ಬ್ರಾಹ್ಮಣ ಎಂದು ಕೆಲವು ಕಾಂಗ್ರೆಸ್ ನಾಯಕರು ಹೇಳಿ ವಿವಾದವೆಬ್ಬಿಸಿದ್ದನ್ನು ಇದೀಗ ಬಿಜೆಪಿ ಮತ್ತೆ ಕೆದಕಿದೆ.
ಮಧ್ಯಪ್ರದೇಶದ ಉಜ್ಜೈನಿ ಮಹಾಕಾಳೇಶ್ವರ ದೇವಾಲಯಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿದ ಬೆನ್ನಲ್ಲೇ ಬಿಜೆಪಿ ರಾಹುಲ್ ಗೋತ್ರ ಯಾವುದು? ಅವರು ಜನಿವಾರ ಧರಿಸಿದ್ದರೇ? ಎಂದು ಲೇವಡಿ ಮಾಡಿದೆ.
ಕೇಸರಿ ಭಯೋತ್ಪಾದಕರು ಎಂಬ ಪದ ಪ್ರಯೋಗಿಸಿದ್ದ ಇದೇ ರಾಹುಲ್ ಇದೀಗ ಚುನಾವಣೆ ಹಿನ್ನಲೆಯಲ್ಲಿ ಹಿಂದೂ ದೇವಾಲಯಗಳಿಗೆ ಸುತ್ತುತ್ತಿದ್ದಾರೆ. ಈಗ ಅವರು ಯಾವ ರೀತಿಯ ಜನಿವಾರ ಧರಿಸಿದ್ದಾರೋ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ವ್ಯಂಗ್ಯ ಮಾಡಿದ್ದಾರೆ. ನಿನ್ನೆಯಷ್ಟೇ ಉಜ್ಜೈನಿಗೆ ರಾಹುಲ್ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.