Publish Date: Mon, 29 Oct 2018 (09:44 IST)
Updated Date: Mon, 29 Oct 2018 (18:19 IST)
ತಿರುವನಂತಪುರಂ: ಕೇರಳ ಪ್ರವಾಸದಲ್ಲಿದ್ದಾಗ ಅಲ್ಲಿನ ಸಿಪಿಐ ಎಂ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಸಿಎಂ ಪಿಣರಾಯಿ ವಿಜಯನ್ ತಿರುಗೇಟು ನೀಡಿದ್ದಾರೆ.
‘ನಿಮ್ಮಂಥವರಿಗೆ ಇಲ್ಲಿ ಜಾಗವಿಲ್ಲ. ನಮ್ಮ ಸುಭದ್ರ ಸರ್ಕಾರ ಉರುಳಿಸಲು ನಿಮ್ಮ ಬಲ ಸಾಕಾಗಲ್ಲ ಎಂದು ಸಿಎಂ ಪಿಣರಾಯಿ ವಿಜಯನ್ ಅಮಿತ್ ಶಾಗೆ ತಿರುಗೇಟು ನೀಡಿದ್ದಾರೆ.
ಕೇರಳ ಸರ್ಕಾರ ಶಬರಿಮಲೆ ವಿಚಾರದಲ್ಲಿ ಹಿಂದೂಗಳ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ತಿರುಗೇಟು ನೀಡಿರುವ ಪಿಣರಾಯಿ ವಿಜಯನ್, ನಮ್ಮ ಸರ್ಕಾರವನ್ನು ಉರುಳಿಸುತ್ತೇವೆ ಎಂದು ಅಮಿತ್ ಶಾ ಹೇಳಿದ್ದು ಕೇಳಿದ ಹಾಗಾಯಿತು. ಆದರೆ ಅವರ ಟೊಳ್ಳು ಶಕ್ತಿಯಿಂದ ನಮ್ಮ ಸುಭದ್ರ ಸರ್ಕಾರ ಉರುಳಿಸಲಾಗದು. ಇಂತಹ ಗಿಮಿಕ್ ನ್ನೆಲ್ಲಾ ಅವರು ಇಲ್ಲಿ ಇಟ್ಟುಕೊಳ್ಳುವುದು ಬೇಡ, ಗುಜರಾತ್ ನಲ್ಲಿ ಇದೆಲ್ಲಾ ನಡೆಯಬಹುದು. ನೀವು ಭಾರೀ ನಿರೀಕ್ಷೆಯಿಟ್ಟುಕೊಂಡು ಇಲ್ಲಿಗೆ ಬಂದಿರುತ್ತೀರಿ. ಆದರೆ ನಿಮ್ಮಂಥವರಿಗೆಲ್ಲಾ ಇಲ್ಲಿ ಜಾಗವಿಲ್ಲ’ ಎಂದು ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.