Select Your Language

Notifications

webdunia
webdunia
webdunia
Sunday, 13 April 2025
webdunia

ಉಪಚುನಾವಣೆ: ಮೈತ್ರಿಯಲ್ಲಿ ಅಪಸ್ವರ?

ಉಪಚುನಾವಣೆ
ಬೆಂಗಳೂರು , ಶನಿವಾರ, 27 ಅಕ್ಟೋಬರ್ 2018 (18:43 IST)
ಉಪಚುನಾವಣೆಗೆ ದಿನಗಣನೆ ಆರಂಭಗೊಂಡಿದೆ. ಏತನ್ಮಧ್ಯೆ ಬಿಜೆಪಿ ಸವಾಲಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಗಳು ಸೆಡ್ಡು ಹೊಡೆದಿದ್ದು, ತನ್ನದೇ ಆದ ತಂತ್ರಗಳಿಗೆ ಮೊರೆಹೋಗಿವೆ.

ರಾಜ್ಯದ ಸಮ್ಮಿಶ್ರ ಸರಕಾರಕ್ಕೆ ಅಗ್ನಿ ಪರೀಕ್ಷೆಯೆಂದೇ ಉಪಚುನಾವಣೆಯನ್ನು ಪರಿಗಣಿಸಲಾಗುತ್ತಿದೆ. ರಣಕಣದಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಏರಲು ಸಿದ್ಧತೆ ನಡೆಸುತ್ತಿರುವ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್, ಜೆಡಿಎಸ್ ವಿವಿಧ ರೀತಿಯ ತಂತ್ರಗಳಲ್ಲಿ ಮುಳುಗಿವೆ.

ಬಿಜೆಪಿಗೆ ಮುಖಭಂಗ ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿಯೂ ಸಹ ಜಾತ್ಯಾತೀತ ಪಕ್ಷಗಳು ಒಂದಾಗಬೇಕೆಂಬ ಸಂದೇಶವನ್ನು ರವಾನಿಸುವ ತವಕದಲ್ಲಿರುವ ಕಾಂಗ್ರೆಸ್, ಜೆಡಿಎಸ್ ನಾಯಕರು ಉಪಚುನಾವಣೆಯ ಲೆಕ್ಕಾಚಾರದಲ್ಲಿ ಗಾಢವಾಗಿ ಮುಳುಗಿದ್ದಾರೆ.

ಆದರೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಜಂಟಿಯಾಗಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿಲ್ಲ. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಆ್ಯಂಬುಲೆನ್ಸ್ ನಲ್ಲಿ ರೋಗಿ ಕರೆದೊಯ್ಯುತ್ತಿದ್ದಾಗ ಅಪಘಾತ: ಮೂವರು ಸಾವು